LATEST NEWS
ಎನ್ಐಎ ತನಿಖೆ ನಡೆಯುತ್ತಿದ್ದಂತೆ ಅಕ್ರಮ ಚಿನ್ನ ಸಾಗಾಟ ಪ್ರಕರಣದ ಪ್ರಮುಖ ಪೈಲುಗಳಿಗೆ ಬೆಂಕಿ
ತಿರುವನಂತಪುರ: ಕೇರಳ ಸರಕಾರದ ಸೆಕ್ರೆಟರಿಯೇಟ್ ಪ್ರೋಟೋಕಾಲ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಸುಟ್ಟು ಹೋಗಿದೆ ಎಂದು ಹೇಳಲಾಗಿದೆ.
ಸ್ಥಳಿಯಾಡಳಿತ ಇಲಾಖೆ ಕಾರ್ಯನಿರ್ವಹಿಸುವ ನಾರ್ತ್ ಸ್ಯಾಂಡ್ ವಿಚ್ ಬ್ಲಾಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಸಿದ ಎಲ್ಲಾ ದಾಖಲೆಗಳು ಈ ಬ್ಲಾಕ್ ನಲ್ಲಿದ್ದವು ಎಂದು ಹೇಳಲಾಗಿದೆ. ಇಂದು ಸಂಜೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಎಲ್ಲಾ ಪೈಲುಗಳು ಕಂಪ್ಯೂಟರ್ ಗಳು ಸಂಪೂರ್ಣ ಸುಟ್ಟು ಹೋಗಿವೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಚೆಂಗಲ್ ಚುಳ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.
ಈಗಾಗಲೇ ಕೇಂದ್ರ ಸರಕಾರ ಕೇರಳದ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ರಾಷ್ಟ್ಪೀಯ ತನಿಖಾ ಆಯೋಗಕ್ಕೆ ವಹಿಸಿದ್ದು, ತನಿಖೆ ಪ್ರಾರಂಭವಾಗಿದೆ. ಈ ಚಿನ್ನ ಸಾಗಾಟದ ಪ್ರಮುಖ ಸೂತ್ರಧಾರೆ ಸ್ವಪ್ನ ಸುರೇಶ್ ಅವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಕೇರಳ ಸರಕಾರದ ಹಲವಾರು ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆ ನಡೆಸುತ್ತಿದ್ದು, ಇಂದು ಸುಟ್ಟು ಹೋದ ಬ್ಲಾಕ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿಗಳಿದ್ದವು ಎಂದು ಹೇಳಲಾಗಿದೆ.
ಈ ಘಟನೆ ಹಿನ್ನಲೆ ಕೇರಳದ ತಿರುವನಂತಪುರದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸಿದ್ದು, ಇಂದು ಬೆಂಕಿ ಬಿದ್ದಿರುವುದಲ್ಲಿ ಅನುಮಾನ ಇದ್ದು, ಎನ್ಐಎ ತನಿಖೆಗೆ ಯಾವುದೇ ಸಾಕ್ಷಿಗಳು ಸಿಗದ ಹಾಗೇ ಮಾಡಲು ಬೆಂಕಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳೇ ಈ ಘಟನೆಗೆ ಪ್ರಮುಖ ಕಾರಣ ಎಂದು ಕಾಂಗ್ರೇಸ್ ಆರೋಪಿಸಿದೆ.