Connect with us

LATEST NEWS

ದಕ್ಷಿಣಕನ್ನಡ 247 ; ಉಡುಪಿ 217 ಕೊರೊನಾ ಪ್ರಕರಣ

ಮಂಗಳೂರು ಅಗಸ್ಟ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 247 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು 3 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 247 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 10778 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 218 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2323 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಕೂಡ ಜಿಲ್ಲೆಯಲ್ಲಿ 3 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 319 ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಮಂಗಳೂರು -171, ಬಂಟ್ವಾಳ – 48, ಸುಳ್ಯ -4, ಬೆಳ್ತಂಗಡಿ – 10, ಪುತ್ತೂರು – 6, ಹೊರ ಜಿಲ್ಲೆಯವರು – 8 ಪ್ರಕರಣಗಳಿವೆ.

ಉಡುಪಿ ಕೊರೊನಾ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ ಇಂದು 217 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 10453 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ಕೊರೊನಾದಿಂದಾಗಿ ಇಬ್ಬರು ಸಾವನಪ್ಪಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7737 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2625 ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 1041 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 1584 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಉಡುಪಿಯಲ್ಲಿ ಕೊರೊನಾದಿಂದಾಗಿ ಇಬ್ಬರು ಸಾವನಪ್ಪಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 91 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ದಾಖಲಾದ ಪ್ರಕರಣಗಳಲ್ಲಿ ಉಡುಪಿ – 122, ಕುಂದಾಪುರ -40 , ಕಾರ್ಕಳ -51, ಜಿಲ್ಲೆಯ ಹೊರಗಿನ – 4 ಪ್ರಕರಣಗಳಿವೆ.

Facebook Comments

comments