Connect with us

LATEST NEWS

ಕಂದಕಕ್ಕೆ ಉರುಳಿದ ಆರು ಮಂದಿ ಭಾರತೀಯರಿದ್ದ ಬಸ್; 17 ಮಂದಿ ಮೃತ್ಯು

Share Information

ಮೆಕ್ಸಿಕೊ ಸಿಟಿ, ಆಗಸ್ಟ್ 04: ಆರು ಮಂದಿ ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದ ಬಸ್ 164 ಅಡಿ ಆಳದ ಕಂದಕಕ್ಕೆ ಬಿದ್ದು ಕನಿಷ್ಠ 17 ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಘಟನೆಯಲ್ಲಿ 22 ಮಂದಿಗೆ ಗಾಯಗಳಾಗಿದ್ದು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.ಮೆಕ್ಸಿಕೊದ ನಯಾರಿತ್ ರಾಜ್ಯದಲ್ಲಿ ಈ ದುರ್ಘಟನೆ ನಡೆದಿದ್ದು, ಪರಿಹಾರ ಕಾರ್ಯಾಚರಣೆ ತೀರಾ ಕಷ್ಟಕರವಾಗಿದೆ ಎಂದು ಭದ್ರತಾ ಮತ್ತು ನಾಗರಿಕ ಸುರಕ್ಷಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರಾಡ್ರಿಗಸ್ ಹೇಳಿದ್ದಾರೆ. 14 ಮಂದಿ ಮಕ್ಕಳು ಹಾಗೂ ಮೂವರು ದುರಂತದಲ್ಲಿ ಮೃತಪಟ್ಟಿದ್ದು, ತಿಜುನಾ ನಗರಕ್ಕೆ ಹೊರಟಿದ್ದ ಬಸ್ ರಸ್ತೆಯಿಂದಾಚೆ ಚಲಿಸಿ ಕಂದಕಕ್ಕೆ ಉರುಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ನಯಾರಿತ್ ನಾಗರಿಕ ಸುರಕ್ಷೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನೆಯ ಫೋಟೊ ಶೇರ್ ಮಾಡಿದ್ದು, ಹೆದ್ದಾರಿಯಲ್ಲಿ ಸಾಲು ಸಾಲಾಗಿ ಆ್ಯಂಬುಲೆನ್ಸ್ ನಿಂತಿರುವುದು ಮತ್ತು ಸಮವಸ್ತ್ರ ಧರಿಸಿದ ಅಧಿಕಾರಿಗಳು ಕಂದಕದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವುದು ಕಾಣಿಸುತ್ತಿದೆ. ಕಂದಕದಿಂದ ಪ್ರಯಾಣಿಕರನ್ನು ಮೇಲೆತ್ತುವ ಪ್ರಯತ್ನ ನಡೆದಿದೆ.

ಎಲೈಟ್ ಪ್ಯಾಸೆಂಜರ್ ಲೈನ್‍ಗೆ ಸೇರಿದ ಬಸ್, ತೆಪಿಕ್ ರಾಜ್ಯ ರಾಜಧಾನಿ ಬರ್ರಾಂಕಾ ಬ್ಲಾಂಕಾ ಪಟ್ಟಣದ ಹೊರವಲಯದಲ್ಲಿ ದುರಂತಕ್ಕೀಡಾಗಿದೆ. ಇದರಲ್ಲಿ ಆರು ಮಂದಿ ಭಾರತೀಯ ಪ್ರಜೆಗಳು ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ವಿವರಕ್ಕಾಗಿ ಸಂಪರ್ಕಿಸಿದಾಗ ಬಸ್ ಕಂಪನಿ ಅಥವಾ ಮೆಕ್ಸಿಕೋದ ವಲಸೆ ಸಂಸ್ಥೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ತಿಂಗಳು ದಕ್ಷಿಣ ರಾಜ್ಯ ಓಕ್ಸಾಕಾದಲ್ಲಿ ನಡೆದ ಇಂಥದ್ದೇ ದುರಂತದಲ್ಲಿ 19 ಮಂದಿ ಬಲಿಯಾಗಿದ್ದರು. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಅಮೆರಿಕದಿಂದ ಕೇಂದ್ರ ಅಮೆರಿಕಕ್ಕೆ ವಲಸೆಯವರನ್ನು ಕರೆದೊಯ್ಯುತ್ತಿದ್ದ ಬಸ್ ದುರಂತಕ್ಕೀಡಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದರು.


Share Information
Advertisement
Click to comment

You must be logged in to post a comment Login

Leave a Reply