KARNATAKA
ತೊಟ್ಟಿಲಲ್ಲಿ ಬೆಚ್ಚಗೆ ಮಲಗಿದ್ದ 9 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಅಜಯ್ ಗಿರಿ ತಂಡ
ಆಗುಂಬೆ ಅಗಸ್ಟ್ 16: ಮನೆಯೊಂದರಲ್ಲಿ ಅಟ್ಟದ ಮೇಲೆ ಇಟ್ಟಿದ್ದ ಮಗುವಿನ ತೊಟ್ಟಿಲಲ್ಲಿ ಬೆಚ್ಚಗೆ ಮಲಗಿದ್ದ 9 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬೀಡಲಾಗಿದೆ.
ಆಗುಂಬೆಯ ಬಳಿಯ ಸೊಮೇಶ್ವರದಲ್ಲಿ ಮನೆಯೊಂದರಲ್ಲಿ ಕಾಳಿಂಗ ಸರ್ಪ ಸೇರಿಕೊಂಡಿರುವ ಬಗ್ಗೆ ಮಾಹಿತಿಯನ್ನು ಮನೆಯವರು ಅರಣ್ಯ ಇಲಾಖೆಗೆ ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆಗುಂಬೆ ಮಳೆಗಾಡು ಸಂಶೋಧನಾ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಬಳಿಕ ಎಆರ್ ಆರ್ ಎಸ್ ತಂಡದ ಕಾಳಿಂಗ ಸರ್ಪ ಇದ್ದ ಮನೆಗೆ ತಲುಪಿದೆ. ಮನೆಯ ಅಟ್ಟದ ಮೇಲೆ ಇಟ್ಟಿದ್ದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತ್ತು. ಬಳಿಕ ಅಜಯ್ ಗಿರಿ ನೇತೃತ್ವದ ತಂಡ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಸ್ಥಳೀಯರಿಗೆ ಹಾವಿನ ರಕ್ಷಣೆ ಕುರಿತಂತೆ ಕಿರು ಜಾಗೃತಿ ಯನ್ನು ನಡೆಸಿಕೊಟ್ಟರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದೊಂದಿಗೆ ಹಾವನ್ನು ಕಾಡಿಗೆ ಬಿಡಲಾಗಿದೆ.