FILM
ಲಾಕ್ ಡೌನ್ ಆರ್ಥಿಕ ಸಂಕಷ್ಟ – ಮಲೆಯಾಳಂ ಕಿರುತೆರೆ ನಟ ನೇಣಿಗೆ ಶರಣು
ತಿರುವನಂತಪುರಂ: ಕೊರೊನಾ ಲಾಕ್ ಡೌ್ನ್ ನಿಂದ ಉಂಟಾದ ಆರ್ಥಿಕ ಸಂಕಷ್ಟ ಮಲಯಾಳಂನ ಖ್ಯಾತ ಕಿರುತೆರೆ ನಟನೊಬ್ಬನನ್ನು ಬಲಿ ಪಡೆದಿದ್ದು, ಖ್ಯಾತ ಕಿರುತೆರೆ ನಟ ರಮೇಶ್ ವಲಿಯಸಲಾ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಿರುವನಂತಪುರಂನಲ್ಲಿರುವ ಮನೆಯಲ್ಲಿ ಮುಂಜಾನೆ 6.30 ರ ಸುಮಾರಿಗೆ ರಮೇಶ್ ವಲಿಯಸಲಾ ಅವರ ಮೃತದೇಹ ಸಿಲ್ಲಿಂಗ್ ಪ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದನ್ನು ನೋಡಿ ಶಾಕ್ ಆದ ಆತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇದೊಂದು ಅಸ್ವಾಭಾವಿಕ ಸಾವು ಎಂದು ಪರಿಗಣಿಸಿ ಸೆಕ್ಷನ್ 174ರಡಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ನಲ್ಲಿ ರಮೇಶ್ ಅವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಅವರು ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅಲ್ಲಿಂದಲೇ ಅವರ ಕಿರುತೆರೆ ನಂಟು ಪ್ರಾರಂಭವಾಗಿತ್ತು. ಕಳೆದ 22 ವರ್ಷಗಳಿಂದ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿ ಜನಪ್ರಿಯತೆ ಗಳಿಸಿದ್ದರು. ತಿರುವನಂತಪುರಂ ವಲಿಯಾಶಲಾದಲ್ಲಿ ಎರಡನೇ ಪತ್ನಿ ಹಾಗೂ ಪುತ್ರನ ಜೊತೆ ರಮೇಶ್ ವಾ ಸವಾಗಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶೂಟಿಂಗ್ ಮುಗಿಸಿಕೊಂ ಡು ಮನೆಗೆ ವಾಪಾಸ್ ಆಗಿದ್ದ ಅವರು ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ.