Connect with us

  LATEST NEWS

  ಅಪ್ರಾಪ್ತ ವಿಧ್ಯಾರ್ಥಿಗಳಿಂದ ತಮ್ಮದೇ ಶಾಲೆಯ ಮೂರನೇ ತರಗತಿ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ, ಕೊಲೆ

  ಆಂದ್ರಪ್ರದೇಶ ಜುಲೈ 11: ಅಪ್ರಾಪ್ತ ವಿಧ್ಯಾರ್ಥಿಗಳು ತಮ್ಮದೇ ಶಾಲೆಯ 3ನೇ ತರಗತಿ ವಿಧ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯನ್ನು ಕೊಲೆಗೈದ ಘಟನೆ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.


  ಹಳೆ ಮುಚ್ಚುಮೂರಿನ ಉದ್ಯಾನವನಕ್ಕೆ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋದ ಬಾಲಕಿ ಭಾನುವಾರ ನಾಪತ್ತೆಯಾಗಿದ್ದಳು. ಸಂಜೆಯಾದರೂ ಮಗು ಮನೆಗೆ ಬಾರದ ಕಾರಣ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

  ಬಾಲಕಿಯ ಸುಳಿವನ್ನು ಪತ್ತೆ ಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆಯೊಂದಿಗೆ ಮುಚುಮರ್ರಿ ಉದ್ಯಾನವನದಲ್ಲಿ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದರು. ಆದರೆ ಯಾವುದೇ ಸುಳಿವು ದೊರೆಯದೆ ಹೋದಾಗ ಪೊಲೀಸರು ಶೋಧ ಕಾರ್ಯಕ್ಕಾಗಿ ಶ್ವಾನದಳದ ಮೊರೆ ಹೋಗಿದ್ದರು. ಶೋಧ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶ್ವಾನವು ಮೂವರು ಆರೋಪಿ ಬಾಲಕರ ಮನೆಯೆದುರು ಹೋಗಿ ನಿಂತಿತ್ತು. ಅವರನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ ನಂತರ, ಪೊಲೀಸರು ಅವರನ್ನು ಬಂಧಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಬಾಲಕರು ತಾವು ಮೃತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ನಂತರ ಆಕೆಯನ್ನು ಹತ್ಯೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯು ಪ್ರಗತಿಯಲ್ಲಿದೆ.

  Share Information
  Advertisement
  Click to comment

  You must be logged in to post a comment Login

  Leave a Reply