LATEST NEWS
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಎಣ್ಣೆ ಪಾರ್ಟಿ: ಸಿಸಿಬಿಯ 8 ಸಿಬ್ಬಂದಿ ಎತ್ತಂಗಡಿ
ಮಂಗಳೂರು ಜನವರಿ 31: ಕರ್ತವ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ಆರೋಪಿಯೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ 8 ಮಂದಿ ಪೊಲೀಸರನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ನಗರದ ಕುತ್ತಾರು ಬಳಿಯ ಬಾರ್ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸಿಸಿಬಿ ಘಟಕದ 8 ಸಿಬ್ಬಂದಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಬಾರ್ ಬಳಿ ಸರ್ಕಾರಿ ವಾಹನ ನಿಲ್ಲಿಸಿ ಪಾರ್ಟಿ ಮಾಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ, ಸಿಸಿಬಿ ಪೊಲೀಸರ ಪಾರ್ಟಿ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಎಂಟು ಸಿಸಿಬಿ ಪೊಲೀಸರ ವಿರುದ್ದ ಶಿಸ್ತು ಕ್ರಮಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಐಎಎಸ್ ಹಾಗೂ ಐವರು ಕಾನ್‌ಸ್ಟೇಬಲ್‌ಗಳನ್ನು ನಗರ ಪೊಲೀಸ್ ಕಮೀಷನರೇಟ್‌ನ ಬೇರೆ ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಸಿಸಿಬಿ ಘಟಕದ 8 ಸಿಬ್ಬಂದಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಆದೇಶದಂತೆ ಮೂವರು ಐಎಎಸ್ ಹಾಗೂ ಐವರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊಣಾಜೆ, ಬಜ್ಪೆ, ಉತ್ತರ, ಕಂಕನಾಡಿ, ಮಂಗಳೂರು ದಕ್ಷಿಣ, ಉರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಮೂವರು ಎಎಸ್ಐಗಳು ಹಾಗು ಐದು ಮಂದಿ ಮುಖ್ಯ ಪೇದೆಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಟ್ಟಿಂಗ್ ಆರೋಪಿ ಜೊತೆ ಪಾರ್ಟಿ ಮಾಡಿರುವುದು ಇಲಾಖೆಗೆ ಮುಜುಗರ ತರುವಂತಹದ್ದು, ಇದರಿಂದ ಇಲಾಖೆ ಮೇಲಿನ ನಂಬಿಕೆಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.