KARNATAKA
‘ದುಬೈ ಗೋಲ್ಡ್’ ಆಸೆ ತೋರಿಸಿ 60 ಲಕ್ಷ ಲೂಟಿ, ಐವರು ಖದೀಮರು ಅರೆಸ್ಟ್..!
ಬೆಂಗಳೂರು : ದುಬೈನಿಂದ ತಂದ ಚಿನ್ನವನ್ನು ಕಡಿಮೆ ಬೆಲೆಗೆ ಕೊಡುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 60 ಲಕ್ಷರೂ. ವಂಚಿಸಿದ್ದ ಆವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು ಬಂಧಿತ ಅರೋಪಿಗಳಿಂದ 53 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿ.11 ರಂದು ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ ಖದೀಮರು ಹಣ ದೋಚಿದ್ದರು. ಕಡಿಮೆ ಬೆಲೆಗೆ ದುಬೈ ನಿಂದ ಚಿನ್ನ ತರಿಸಿದ್ದೇವೆ. ಹಣ ತೆಗೆದುಕೊಂಡು ಬನ್ನಿ ದುಬೈ ರೇಟಿಗೆ ಚಿನ್ನ ಕೊಡ್ತೇವೆ ಎಂದು ಸಂಕೇತ್ ಅವರನ್ನು ಪುಸಲಾಯಿಸಿ ಆದರ್ಶ ನಗರಕ್ಕೆ ಕರೆಸಿಕೊಂಡಿದ್ದರು ಅರೋಪಿಗಳು.
ಕಡಿಮೆ ಬೆಲೆ ಚಿನ್ನದ ಆಸೆಯಿಂದ ಹಣದೊಂದಿಗೆ ಏರಿಯಾಕ್ಕೆ ಬಂದಿದ್ದ ಸಂಕೇತರನ್ನ ಮಚ್ಚಿನಿಂದ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಹಣ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಬಸವೇಶ್ವರನಗರ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನು ಹತ್ತಿ ಕೊನೆಗೆ ಖದೀಮರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಅರೋಪಿಗಳಿಂದ 53 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ. ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ವಂಚನೆ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
You must be logged in to post a comment Login