LATEST NEWS
ಗಾಂಜಾ ಸೇವನೆ, 6 ವಿದೇಶೀ ಯುವತಿಯರ ಬಂಧನ.

ಉಡುಪಿ,ಸೆಪ್ಟಂಬರ್ 15: ಗಾಂಜಾ ಸೇವನೆಯ ಮಾಡುತ್ತಿದ್ದ ಮಲೇಶಿಯಾ ಮೂಲದ ಆರು ಯುವತಿಯರನ್ನು ಮಣಿಪಾಲ ಪೋಲೀಸರು ಬಂಧಿಸಿದ್ದಾರೆ.
ಮಣಿಪಾಲದಲ್ಲಿ ಈ ಯುವತಿಯರು ಗಾಂಜಾ ಸೇವಿಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರ ಕಾರ್ಯಾಚರಣೆ ನಡೆಸಿ ಈ ಯುವತಿಯರನ್ನು ಬಂಧಿಸಿದ್ದಾರೆ.

ಬಂಧಿತ ಆರು ಯುವತಿಯರ ವೈದ್ಯಕೀಯ ತಪಾಸಣೆಯನ್ನೂ ನಡೆಸಲಾಗಿದ್ದು, ಗಾಂಜಾ ಸೇವಿಸಿದ್ದು, ತಪಾಸಣೆಯ ವೇಳೆ ಸಾಬೀತಾಗಿದೆ. ಮಾದಕ ವಸ್ತುಗಳ ಸೇವನೆ ಕುರಿತಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯಾದ ಡಾ ಸಂಜೀವ ಪಾಟೀಲ್ ಪ್ರತಿಕ್ರಿಯಿಸಿದ್ದು, ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ ಹಾಗೂ ಇವುಗಳನ್ನು ಎಲ್ಲಿಂದ ಪೂರೈಸಲಾಗುತ್ತಿದೆ ಎನ್ನುವುದನ್ನೂ ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.