Connect with us

DAKSHINA KANNADA

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ,ಇಬ್ಬರು ಗಂಭೀರ

ಪುತ್ತೂರು,ಸೆಪ್ಟಂಬರ್ 13 : ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಮೂಲತ ಸುಳ್ಯದ ಐವರ್ನಾಡು ನಿವಾಸಿಯಾದ ಹಾಗೂ ಪ್ರಸ್ತುತ ಕುಂತೂರಿನಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಮಲಾದೇವಿ (41) ತನ್ನ ಗಂಡನ ಜತೆಗಿನ ವೈಮನಸ್ಸಿನಿಂದ ಬೇಸತ್ತು ತಾನು ಹಾಗೂ ತನ್ನ ಮೂವರು ಮಕ್ಕಳಿಗೂ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಗೆ ಮೊದಲಿಗೆ ನಾಲ್ವರನ್ನೂ ಕರೆ ತರಲಾಗಿತ್ತಾದರೂ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲಾದೇವಿ ಹಾಗೂ ಸುಮನಾ ಸ್ಥಿತಿ ಗಂಭೀರವಾಗಿದ್ದು, ಉಳಿದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಕಡಬ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಕಮಲಾದೇವಿ ಮೂಲತ ಸುಳ್ಯ ತಾಲೂಕಿನ ಐವರ್ನಾಡು ನಿವಾಸಿಯಾಗಿದ್ದು, ಅವರನ್ನು ಕಡಬದ ಕೊಣಾಜೆ ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿತ್ತು. ಕಮಲಾದೇವಿ ಪತಿ ಹಾಗೂ ಈಕೆ ಇಬ್ಬರೂ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸವನ್ನು ನಿರ್ವಹಿಸುತ್ತಿದ್ದು, ಇವರು ಶ್ರೀಲಂಕಾ ನಿರಾಶ್ರಿತ ಕಾಲನಿಯ ವಾಸಿಗಳಾಗಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಗಂಡನ ಜೊತೆಗಿನ ಮನಸ್ತಾಪವೇ ಕಾರಣ ಎಂದು ತಿಳಿದುಬಂದಿದ್ದು, ಕಡಬ ಪೋಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

Facebook Comments

comments