LATEST NEWS
ಕುವೈಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರಿಗರಿಗೆ ಅಪತ್ಬಾಂದವರಾದ ಶಾಸಕ ವೇದವ್ಯಾಸ್ ಕಾಮತ್
ಕುವೈಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರಿಗರಿಗೆ ಅಪತ್ಬಾಂದವರಾದ ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಮೇ 25: ಸೌದಿ ರಾಷ್ಟ್ರದಲ್ಲಿ ಉದ್ಯೋಗದ ಕನಸು ಕಂಡು ಮಾಣಿಕ್ಯ ಅಸೋಸಿಯೇಟ್ಸ್ ಫ್ಲೇಸ್ ಮೆಂಟ್ ಎನ್ನುವ ಕಂಪೆನಿಯಂದ ವಂಚನೆಗೊಳಗಾದ ಸುಮಾರು 35 ಮಂದಿ ಮಂಗಳೂರು ಯುವಕರಿಗೆ ಶಾಸಕ ವೇದವ್ಯಾಸ್ ಕಾಮತ್ ಅಪತ್ಬಾಂದವರಾಗಿದ್ದಾರೆ.
ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಇರುವ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ನಿಂದ ಸುಮಾರು 35 ಯುವಕರು ಮೋಸಕ್ಕೊಳಗಾಗಿದ್ದಾರೆ. ಕುವೈಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಕಂಪನಿಯ ಪ್ರಸಾದ್ ಶೆಟ್ಟಿ ಎಂಬವರು ಪ್ರತಿಯೊಬ್ಬರಿಂದ 65 ಸಾವಿರ ರೂಪಾಯಿ ವಸೂಲಿ ಮಾಡಿದ್ದರು. ಇದನ್ನು ನಂಬಿ ಕುವೈಟ್‍ಗೆ ತೆರಳಿದ್ದ ಜನರು ಮಾತ್ರ ಸರಿಯಾದ ಕೆಲಸ ದೊರೆಯದೆ, ಕಳೆದ 6 ತಿಂಗಳಿಂದ ಪರದಾಡುತ್ತಿದ್ದಾರೆ. ಪ್ರಸ್ತುತ ಊಟಕ್ಕೂ ಗತಿಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ನಡುವೆ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕೊನೆಯದಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ವಿಡಿಯೋ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಸಂತ್ರಸ್ಥರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕ ವೇದವ್ಯಾಸ್ ಕಾಮತ್ ಕೂಡಲೇಸ್ಪಂದಿಸಿದ್ದು, ಶಾಸಕರು ಕುವೈಟ್‍ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.
ಅಲ್ಲದೆ ಶಾಸಕರ ಗೆಳೆಯರಾದ ರಾಜ್ ಭಂಡಾರಿ ಎಂಬವರು ಕುವೈತ್ನಲ್ಲಿದ್ದು, ಅವರ ಮೂಲಕ ಯುವಕರನ್ನು ಸಂಪರ್ಕಿಸಲಾಗಿದೆ. ಅಲ್ಲದೆ, ಯುವಕರಿಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಯುವಕರ ಪಾಸ್ ಪೋರ್ಟ್ ಪ್ರತಿ ನಾಳೆಯೊಳಗೆ ವಾಟ್ಸಪ್ನಲ್ಲಿ ತಲುಪಿಸುವಂತೆ ಸೂಚಿಸಿದ್ದೇನೆ. ಅದನ್ನು ಸ್ವೀಕರಿಸಿದ ಕೂಡಲೇ ಭಾರತ ಸರ್ಕಾರದ ಮೂಲಕ ರಾಯಭಾರ ಕಚೇರಿ ಸಂಪರ್ಕಿಸಿ ಯುವಕರನ್ನು ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಂಡಿದ್ದಾರೆ. ಇಂದು ಇಂಡಿಯನ್ ಎಂಬೆಸಿ ಸಂತ್ರಸ್ತರನ್ನು ಭೇಟಿಯಾಗಲಿದೆ.
ಸಂತ್ರಸ್ಥರ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಪಂದಿಸಿ ಯುವಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ವೇದವ್ಯಾಸ್ ಕಾಮತ್ ಅವರ ಕಾರ್ಯವೈಖರಿಗೆ ಬಗ್ಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
VIDEO