Connect with us

FILM

5ಕೋಟಿ ಆದಾಯ ಕಳೆದುಕೊಂಡ ಶಾರುಖ್ ಖಾನ್: ನಮ್ಮ ಜಾಹೀರಾತಿಗೆ ನೀವು ಬೇಡ ಎಂದ ಕಂಪೆನಿ

ಮುಂಬೈ, ಅಕ್ಟೋಬರ್ 10: ಡ್ರಗ್ಸ್‌ ಕೇಸ್‌ನಲ್ಲಿ ಆರ್ಯನ್‌ ಖಾನ್‌ ಎನ್‌ಸಿಬಿ ಬಲೆಗೆ ಬೀಳುತ್ತಿದ್ದಂತೆಯೇ ಶಾರುಖ್‌ ಖಾನ್‌ಗೆ ಭಾರಿ ಸಂಕಟ ಎದುರಾಗಿದೆ. ಇವರು ನಾಲ್ಕೈದು ವರ್ಷಗಳಿಂದ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಕೆಲಸ ಮಾಡುತ್ತಿದ್ದ ಏಷ್ಯುಕೇಶನಲ್​​ ಕಂಪೆನಿ ತನ್ನ ಜಾಹೀರಾತಿನಿಂದ ಶಾರುಖ್‌ ಅವರನ್ನು ತೆಗೆದುಹಾಕಿದೆ.

ಈ ಜಾಹೀರಾತಿನಿಂದ ಶಾರುಖ್‌ ವಾರ್ಷಿಕವಾಗಿ ಸುಮಾರು ಐದು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರು.

2017ರಿಂದಲೂ ಈ ಕಂಪೆನಿಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದರು ಶಾರುಖ್‌. ಏಷ್ಯುಕೇಶನಲ್​ ಆಯಪ್​ವೊಂದರ ಮುಖಾಂತರ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದು. ಆದರೆ ಮಗನಿಗೇ ಬುದ್ಧಿ ಕಲಿಸಲು, ಉತ್ತಮ ಮಾರ್ಗದರ್ಶನ ತೋರಲು ಆಗದ ತಂದೆ ಬೇರೆ ಮಕ್ಕಳಿಗೆ ಏನು ಹೇಳಿಕೊಟ್ಟಾರು ಎಂದಿರುವ ಕಂಪೆನಿ ಜಾಹೀರಾತಿನಿಂದ ಅವರನ್ನು ಹಿಂದಕ್ಕೆ ಪಡೆದಿದೆ.

ಆರ್ಯನ್‌ ಖಾನ್‌ ಎನ್‌ಸಿಬಿ ಬಲೆಗೆ ಬೀಳುತ್ತಿದ್ದಂತೆಯೇ ಈ ಜಾಹೀರಾತಿನ ಬಗ್ಗೆ ಜಾಲತಾಣಗಳಲ್ಲಿ ಭಾರಿ ಟೀಕೆ ಕೇಳಿಬಂದಿದ್ದರಿಂದ ಈ ನಿರ್ಧಾರವನ್ನು ಕಂಪೆನಿ ತೆಗೆದುಕೊಂಡಿದೆ. ಈ ಮಧ್ಯೆ, ಶಾರುಖ್ ಖಾನ್​ ಅವರ ಡ್ರೈವರ್ಗೂ ಎನ್​​ಸಿಬಿ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇರುವ ಸಿನಿರಂಗದ ಹಲವರನ್ನು ಇದಾಗಲೇ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.