Connect with us

UDUPI

ಮಸೀದಿ ಆಡಳಿತ ಮಂಡಳಿ ಜೊತೆ ಮನಸ್ತಾಪ 32 ವಿಧ್ಯಾರ್ಥಿಗಳೊಂದಿಗೆ ಧರ್ಮಗುರು ನಾಪತ್ತೆ

ಮಸೀದಿ ಆಡಳಿತ ಮಂಡಳಿ ಜೊತೆ ಮನಸ್ತಾಪ 32 ವಿಧ್ಯಾರ್ಥಿಗಳೊಂದಿಗೆ ಧರ್ಮಗುರು ನಾಪತ್ತೆ

ಉಡುಪಿ ನವೆಂಬರ್ 3: ಮಸೀದಿ ಆಡಳಿತ ಮಂಡಳಿ ಜೊತೆ ಮನಸ್ತಾಪ ಹೊಂದಿದ್ದ ಕಾರಣಕ್ಕೆ ಮಸೀದಿ ಮೌಲ್ವಿಯೊಬ್ಬರು 32 ಮಂದಿ ವಿಧ್ಯಾರ್ಥಿಗಳೊಂದಿಗೆ ನಾಪತ್ತೆಯಾಗಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿದೆ. ಕಳೆದ ಐದು ವರುಷಗಳಿಂದ ಕಾರ್ಕಳದ ಮದೀನಾ ಮಸೀದಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ತಯ್ಯಬ್. ಈತ ಬಿಹಾರ್ ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದೆ.

ನಾಪತ್ತೆಯಾಗಿರುವ ವಿಧ್ಯಾರ್ಥಿಗಳು ಬಿಹಾರ ಮೂಲದಿಂದ ಧಾರ್ಮಿಕ ಶಿಕ್ಷಣ ಪಡೆಯಲೆಂದೇ ಕಾರ್ಕಳದ ಮಸೀದಿಗೆ ಆಗಮಿಸಿದ್ದರು ಎಂದ ಹೇಳಲಾಗಿದೆ. ಆದರೆ 32 ವಿದ್ಯಾರ್ಥಿಗಳನ್ನು ಮೌಲ್ವಿ ತಯ್ಯಬ್ ಎಲ್ಲಿಗೆ ಕರೆದುಕೊಂಡು ಹೋಗಿದ್ದಾನೆ ಅನ್ನೋದು ತಿಳಿದುಬಂದಿರಲಿಲ್ಲ.
ಕಳೆದ ತಡರಾತ್ರಿ ಈ ಘಟನೆ ನಡೆದಿದ್ದರು ಮಸೀದಿಯ ಆಡಳಿತ ಮಂಡಳಿ ಈ ವಿಚಾರ ಪೊಲೀಸರ ಗಮನಕ್ಕೆ ತಂದಿರಲಿಲ್ಲ.

ಕಳೆದ ತಡರಾತ್ರಿ ಈ ಘಟನೆ ನಡೆದಿದ್ದರು ಮಸೀದಿಯ ಆಡಳಿತ ಮಂಡಳಿ ಈ ವಿಚಾರ ಪೊಲೀಸರ ಗಮನಕ್ಕೆ ತಂದಿರಲಿಲ್ಲ. ಕಳೆದ ತಡರಾತ್ರಿ ಟೆಂಪೋ ಟ್ರಾವೆಲರ್ ಮೂಲಕ ಕುಂದಾಪುರ ರೈಲ್ವೇ ಠಾಣೆಗೆ ತೆರಳಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿತ್ತು.  ಬಳಿಕ ಆತ 32 ಮಕ್ಕಳನ್ನು ಕರೆದುಕೊಂಡು ಬಿಹಾರಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿತ್ತು.

ಮೌಲ್ವಿ ಹಾಗು ಮಕ್ಕಳ ನಾಪತ್ತೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿರುವ ಕಾರಣ ಎಚ್ಚೆತ್ತ ಮಸೀದಿ ಆಡಳಿತ ಮಂಡಳಿ ಇಂದು ಸಂಜೆ ಕಾರ್ಕಳ ಪೊಲೀಸ್ ಠಾಣೆ ಗೆ ತೆರಳಿ ಮೌಲ್ವಿ ತಯ್ಯಬ್ ವಿರುದ್ದ ಅಪಹರಣ ಪ್ರಕರಣ ದಾಖಲಿಸಿದೆ.

Facebook Comments

comments