Connect with us

  LATEST NEWS

  ದೋಣಿ ಅವಘಡ; ಸಮುದ್ರಕ್ಕೆ ಬಿದ್ದ ಮೀನುಗಾರರ ರಕ್ಷಣೆ

  ಉಡುಪಿ, ಆಗಸ್ಟ್ 31 : ಮೀನುಗಾರಿಕೆಗೆ ತೆರಳಿದ್ದ ದೋಣಿ  ಆಳ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಅರಬ್ಬಿ ಸಮುದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಈ  ದುರ್ಘಟನೆ ಸಂಭವಿಸಿದೆ. ಮೀನುಗಾರಿಕೆಗೆ ಮುಗಿಸಿ ಹಿಂದಿರುಗುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿದೆ . ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ ಮೀನುಗಾರರಾದ ಭಾಸ್ಕರ್ ಖಾರ್ವಿ ಹಾಗೂ ಕರುಣ ಪೂಜಾರಿ ಕಡಲಿಗೆ ಬಿದ್ದಿದ್ದಾರೆ. ಮುಳುಗುತ್ತಿದ್ದ  ಈ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕಡಲಿನ ಭಾರಿ ಅಬ್ಬರದ ಅಲೆಗಳ ನಡುವೆ ಅಪಾಯದಲ್ಲಿದ್ದ ಈ ಇಬ್ಬರು ಮೀನುಗಾರರನ್ನು ಸ್ಥಳೀಯ ಮೀನುಗಾರರು ದೋಣಿಗಳ ಮೂಲಕ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭಾಸ್ಕರ್ ಖಾರ್ವಿ ಹಾಗೂ ಕರುಣ್ ಪೂಜಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .

  Share Information
  Advertisement
  Click to comment

  You must be logged in to post a comment Login

  Leave a Reply