Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ 2 ಕೋಟಿ ಬೆಲೆ ಬಾಳುವ ಚಿನ್ನ ವಶಕ್ಕೆ…!!

    ಮಂಗಳೂರು ನವೆಂಬರ್ 11: ಸುಮಾರು 2 ಕೋಟಿ ಬೆಲೆ ಬಾಳುವ ಚಿನ್ನವನ್ನು ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ ನಾಲ್ವರನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 3.895 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.


    ಬಂಧಿತರು ನವೆಂಬರ್ 10ರಂದು ದುಬೈನಿಂದ ಬಂದ ವಿಮಾನದಲ್ಲಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನಕ್ಕೆ ಬಂದಿಳಿದಿದ್ದಾರೆ. ಶಂಕೆ ಹಿನ್ನಲೆ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ ಪ್ರಯಾಣಿಕರು ಟ್ರಾಲಿ ಬ್ಯಾಗ್ ಗಳಲ್ಲಿ ರೋಡಿಯಂ ಲೇಪಿತ ಚಿನ್ನದ ಪಟ್ಟಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆದು ಕೊಂಡಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply