KARNATAKA
24 ಫೇಕ್ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ: ಕರ್ನಾಟಕದಲ್ಲೂ ಫೇಕ್ ವಿವಿ
ನವದೆಹಲಿ ಅಕ್ಟೋಬರ್ 8: ಕರ್ನಾಟಕ ಸೇರಿದಂತೆ ದೇಶದಲ್ಲಿರುವ 24 ವಿಶ್ವವಿದ್ಯಾಲಯಗಳು ನಕಲಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗೋಷಿಸಿದ ಘೋಷಿಸಿದೆ ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳು ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ, ಈ ವಿವಿಗಳು ಯಾವುದೇ ಪದವಿ ನೀಡಲು ಮಾನ್ಯತೆ ಹೊಂದಿಲ್ಲ ಎಂದು ಕಮಿಷನ್ ಹೇಳಿದೆ.
ಒಟ್ಟು 24 ಫೇಕ್ ವಿವಿಗಳ ಪೈಕಿ ದೆಹಲಿಯಲ್ಲಿ 7, ಉತ್ತರ ಪ್ರದೇಶದಲ್ಲಿ 8 ಫೇಕ್ ವಿಶ್ವವಿದ್ಯಾಲಯಗಳು ಇವೆ ಎಂದು ಕಮಿಷನ್ ಹೇಳಿದೆ.
ಯುಜಿಸಿ’ಯು ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ, ” ಈ 24 ವಿವಿಗಳು ತಮ್ಮ ಸ್ವಂತ ಶೈಲಿಯವಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಂಗೀಕೃತಗೊಂಡಿಲ್ಲ. ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಫೇಕ್ ಯುನಿವರ್ಸಿಟಿಗಳು ಎಂದು ಘೋಷಿಸಲಾಗಿದೆ. ಅಲ್ಲದೇ ಪದವಿ ನೀಡಲು ಯಾವುದೇ ಅರ್ಹತೆ ಇಲ್ಲ” ಎಂದು ಹೇಳಲಾಗಿದೆ.
ಫೇಕ್ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕದಲ್ಲಿಯ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಷನ್ ಸೊಸೈಟಿ, ಕೇರಳದ ಸೆಂಟ್ ಜಾನ್ಸ್ ಯುನಿವರ್ಸಿಟಿ, ಮಹಾರಾಷ್ಟ್ರದ ರಾಜ ಅರೇಬಿಕ್ ಯುನಿವರ್ಸಿಟಿ, ವೆಸ್ಟ್ ಬೆಂಗಾಲ್’ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಷನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಷನ್ ಮತ್ತು ರಿಸರ್ಚ್ ಸಂಸ್ಥೆಗಳು ಸೇರಿವೆ.
ಯುಜಿಸಿ ಕಾಯ್ದೆಯ ಸೆಕ್ಷನ್ 23 ರ ಪ್ರಕಾರ ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆ ವಿಶ್ವವಿದ್ಯಾಲಯ ಪದ ಬಳಕೆಯನ್ನು ನಿಷೇಧಿಸಿ
ಇದೇ ವೇಳೆ ಯುಜಿಸಿ’ಯು ಯುನಿವರ್ಸಿಟೀಸ್ ಆಫ್ ಇಂಡಿಯಾ’ಗೆ ನವೆಂಬರ್ 1, 2020 ರಿಂದ ಹೊಸ ಅಕಾಡೆಮಿಕ್ ಸೆಷನ್ ಅನ್ನು ಆರಂಭಿಸಲು ನಿರ್ದೇಶನ ನೀಡಿದೆ. ಮೊದಲನೇ ವರ್ಷದ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ನವೆಂಬರ್ 2020 ರಿಂದ ತರಗತಿಗಳು ಆರಂಭಗೊಳ್ಳಲಿವೆ. ವಾರ್ಸಿಟಿಯು ನವೆಂಬರ್ 30 ರೊಳಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಮುಗಿಸಲು ಹೇಳಿದೆ.