LATEST NEWS
ಸುಳ್ಯದಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್: ಬಿಜೆಪಿ ಮುಖಂಡನ ಕೊಲೆ ಪ್ರಕರಣದ ಆರೋಪಿಯ ಹತ್ಯೆ
ಸುಳ್ಯ ಅಕ್ಟೋಬರ್ 8 : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಶೂಟೌಟ್ ನಡೆದಿದೆ. ಮುಂಜಾನೆ 6.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಾರಲ್ಲಿ ಬಂದ ಅಪರಿಚಿತರು ಸುಳ್ಯ ಶಾಂತಿ ನಗರದಲ್ಲಿ ವಾಸವಿದ್ದ ಸಂಪತ್ ಕುಮಾರ್ (35) ಎಂಬವರನ್ನು ಹತ್ಯೆ ಮಾಡಲಾಗಿದೆ.
ಕಾರಿನ ಗಾಜಿಗೆ ಗುಂಡೇಟು ಬಿದ್ದ ಕೂಡಲೇ ಸಂಪತ್ ಕಾರಿನಿಂದ ಇಳಿದು ಪಕ್ಕದ ಇನ್ನೊಂದು ಮನೆಯತ್ತ ಓಡಿದ್ದಾರೆ. ಆದರೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡೇಟು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಸಂಪತ್ ಕುಮಾರ್ ಮೃತಪಟ್ಟಿದ್ದಾರೆ.
ಇದೊಂದು ಪೂರ್ವ ದ್ವೇಷದ ಕೃತ್ಯ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗುಂಡೇಟಿಗೆ ಬಲಿಯಾದ ಸಂಪತ್ ವರ್ಷದ ಹಿಂದೆ ನಡೆದ ಕೊಡಗಿನ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಎಂಬವರ ಕೊಲೆ ಪ್ರಕರಣದ ಆರೋಪಿ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
Facebook Comments
You may like
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
-
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಆತ್ಮಹತ್ಯೆ ಶಂಕೆ
-
ಧಾರವಾಡ ಭೀಕರ ರಸ್ತೆ ಅಪಘಾತಕ್ಕೆ 11 ಮಂದಿ ಸಾವು
-
ಗೃಹಪ್ರವೇಶಗೊಳ್ಳಲಿದ್ದ ತನ್ನ ಕನಸಿನ ಮನೆಯಲ್ಲೆ ವಿದ್ಯುತ್ ಶಾಕ್ ಗೆ ಮನೆ ಯಜಮಾನ ಮೃತ್ಯು
-
5ತಿಂಗಳ ಮಗುವಿನೊಂದಿಗೆ ಬೆತ್ತಲಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ!?
-
ಗುಜ್ಜಾಡಿ ರಸ್ತೆ ಅಪಘಾತ ಪತ್ರಿಕಾ ವಿತರಕ ಅಶೋಕ್ ಕೊಡಂಚ ಸಾವು
You must be logged in to post a comment Login