ಕಾಂಗ್ರೆಸ್ ಜೆಡಿಎಸ್ 20 ಶಾಸಕರು ಬಿಜೆಪಿಗೆ – ಶೋಭಾ ಕರಂದ್ಲಾಜೆ

ಉಡುಪಿ ಮೇ 23: ರಾಜ್ಯ ಸಮ್ಮಿಶ್ರ ಸರಕಾರದ ಪತನಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಕಾಂಗ್ರೆಸ್ ಜೆಡಿಎಸ್ 20 ಶಾಸಕರು ಬಿಜೆಪಿಗೆ ಬರಲಿದ್ದು, ಜನವಿರೋಧಿ ಸರಕಾರದ ವಿರುದ್ಧ ಅವರ ಶಾಸಕರೇ ಇದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸತ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿಗ ಅವರು ಬಿಜೆಪಿ ದೇಶದಲ್ಲಿ ಜಯಭೇರಿ ಬಾರಿಸುತ್ತಿದೆ. 2/3rd ಮೆಜಾರಿಟಿ ನಮಗೆ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

ಎಕ್ಸಿಟ್ ಪೋಲ್ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಗೇಲಿ ಮಾಡಿದ್ರು, ಆದರೆ ಮೋದಿ ಸುನಾಮಿ‌ ಕರ್ನಾಟಕದ ವಿಪಕ್ಷವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ, ಇದು ಜನ ಸಮ್ಮಿಶ್ರ ಸರಕಾರದ ಜೊತ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜ್ಯ ಸರಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಡ್ಯ ದಲ್ಲಿ ಹಾವು ಏಣಿ ಆಟ ಮುಂದುವರೆದಿದೆ, ದೇವೇಗೌಡ, ಖರ್ಗೆ, ಮುನಿಯಪ್ಪ, ಮೊಯ್ಲಿ ಸೋಲಾಗಿದ್ದು, ಕಾಂಗ್ರೆಸ್ ನ ನಾಲ್ಕು ಘಟಾನುಘಟಿಗಳಿಗೆ ಸೋಲಾಗಿದೆ ಎಂದರು. ರಾಜ್ಯ ಅಪವಿತ್ರ ಮೈತ್ರಿಗೆ ಎರಡು ಪಕ್ಷ ನಾಶವಾಗಿದೆ ಎಂದರು.

Facebook Comments

comments