LATEST NEWS
ಸಿಂಹದ ಜೊತೆ ಜಗಳಕ್ಕೆ ನಿಂತ ನಾಯಿಗಳು..ಮುಂದೆನಾಯ್ತು…ವೈರಲ್ ವಿಡಿಯೋ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ನವದೆಹಲಿ ಅಗಸ್ಟ್ 14: ಎರಡು ಸಿಂಹಗಳ ಜೊತೆ ಎರಡು ಸಾಕು ನಾಯಿಗಳು ಜಗಳಕ್ಕೆ ನಿಂತ ಘಟನೆ ಗುಜರಾತ್ ನಲ್ಲಿ ನಡೆದಿದ್ದು, ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಷ್ಯಾ ಸಿಂಹಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಗುಜರಾತ್‌ನ ಅಮ್ರೇಲಿಯ ಸಾವರ್ಕುಂಡ್ಲಾದಲ್ಲಿ ಗೋಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಗೋಶಾಲೆಯ ಗೆಟ್ ಬಳಿ ಎರಡು ಸಿಂಹಗಳು ಆಗಮಿಸಿದ್ದವು, ಇದೇ ವೇಳಎ ಗೇಟ್ ಒಳಗಡೆಯಿಂದ ಎರಡು ನಾಯಿಗಳು ಗೇಟ್ ನ ಸಮೀಪಕ್ಕೆ ಬಂದಿದೆ. ಈ ವೇಳೆ ನಾಯಿಗಳು ಸಿಂಹದ ಎದರು ಬೋಗಳು ಪ್ರಾರಂಭಿಸಿದೆ. ಈ ವೇಳೆ ಸಿಂಹ ಗೇಟ್ ಗೆ ತನ್ನ ಕಾಲುಗಳಿಂದ ಬಡಿದಿದೆ. ಈ ಗಲಾಟೆಯಲ್ಲಿ ಮಧ್ಯ ಕಬ್ಬಿಣದ ಗೇಟ್ ಇದ್ದುದರಿಂದ ಯಾವುದೇ ಹಾನಿಯಾಗಿಲ್ಲ.
ಕೆಲವು ಸೆಕೆಂಡ್ ಗಳ ಜಗಳದ ಬಳಿಕ ಸಿಂಹಗಳು ತಮ್ಮ ಪಾಡಿಗೆ ಹೊರಟು ಹೋಗಿವೆ. ಬಳಿಕ ನಾಯಿಯ ಬೋಗಳುವಿಕೆ ಕೇಳಿ ಸ್ಥಳಕ್ಕೆ ಬಂದ ಗೋಶಾಲೆಯ ಸಿಬ್ಬಂದಿ ಟಾರ್ಚ್ ಬಳಸಿ ಪೊದೆಗಳನ್ನು ನೋಡಿದ್ದಾರೆ. ಸದ್ಯ ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆಯಾಗಿದ್ದು ವೈರಲ್ ಆಗಿದೆ. ಕಾಡಿನ ರಾಜನ ಎದುರೇ ನಿಂತ ನಾಯಿಗಳು ಗ್ರೆಟ್ ಅಂತಿದ್ದಾರೆ ನೆಟ್ಟಿಗರು.