2 ವರ್ಷದ ಮಗುವೊಂದು ಕೆರೆಗೆ ಬಿದ್ದು ಸಾವು

ಪುತ್ತೂರು ನವೆಂಬರ್ 28 : ಆಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಬಿದ್ದ ಘಟನೆ ಬಲ್ನಾಡು ನಡುಮನೆಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ್ ಮತ್ತು ಅಶ್ವಿನಿ ದಂಪತಿ ಪುತ್ರ 2 ವರ್ಷದ ಪುಟ್ಟ ಮಗು ಶೌರ್ಯ ಸಾವನಪ್ಪಿದೆ. ಶೌರ್ಯ ನ ಬಲ್ನಾಡು ನಲ್ಲಿರುವ ಅಜ್ಜಿ ಮನೆಯಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಮನೆ ಬಲ್ನಾಡು ಗೆ ರಜಾ ದಿನದಂದು ಬಂದಿದ್ದ ಅಶ್ವಿನಿಯವರು ಪುತ್ರ ಶೌರ್ಯ ನನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ಹೋಗಿದ್ದರು.

ಮೊಮ್ಮಗ ಶೌರ್ಯನನ್ನು ಬೊಜರಾಜ ಅವರು ತೋಟಕ್ಕೆ ಕರೆದೊಯ್ದಿದ್ದರು. ಬಳಿಕ ಮಗುವನ್ನು ಮನೆಯಲ್ಲಿ ಬಿಟ್ಟು ತಾನು ತೋಟಕ್ಕೆ ಹೋಗಿದ್ದಾರೆ. ಈ ನಡುವೆ ಮಗು ಅಜ್ಜನ್ನು ಹಿಂಬಾಲಿಸಿ ಹೋಗಿರಬಹುದು ಎನ್ನಲಾಗಿದ್ದು. ಈ ವೇಳೆ ಆತ ಕೆರೆಗೆ ಆಕಸ್ಮಿಕವಾಗಿ ಬಿದ್ದಿರಬಹುದು ಎನ್ನಲಾಗಿದೆ. ಘಟನೆಯ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information