Connect with us

KARNATAKA

ಲವ್ವರ್ ನ ಮೊಬೈಲ್ ನಲ್ಲಿ ಅವಳ ಪೋಟೋ ಜೊತೆ ವಿವಿಧ ಮಹಿಳೆಯರ 13 ಸಾವಿರ ನಗ್ನ ಪೋಟೋ – ಹುಡುಗಿ ಶಾಕ್

ಬೆಂಗಳೂರು ನವೆಂಬರ್ 29 : ಬಿಪಿಒ ಸಂಸ್ಥೆಯೊಂದರ ಉದ್ಯೋಗಿಯಾಗಿರುವ 22ರ ಹರೆಯದ ಯುವತಿ ತನ್ನ ಗೆಳೆಯನ ಮೊಬೈಲ್ ನ ಗ್ಯಾಲರಿ ತೆಗೆದು ನೋಡಿ ಶಾಕ್ ಆದ ಘಟನೆ ನಡೆದಿದೆ. ಗೆಳೆಯನ ಮೊಬೈಲ್ ನಲ್ಲಿ ಆಕೆಯ ಪೋಟೋ ಸೇರಿದಂತೆ ಬರೋಬ್ಬರಿ 13 ಸಾವಿರಕ್ಕೂ ಅಧಿಕ ನಗ್ನ ಪೋಟೋಗಳು ಇದ್ದವು. ಈ ಕುರಿತ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಮಾಡಿದೆ.


ಬೆಂಗಳೂರಿನಲ್ಲಿ ಬಿಪಿಓ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಅದೇ ಸಂಸ್ಥೆಯ ಯುವಕನೊಂದಿಗೆ ಸ್ನೇಹದಲ್ಲಿದ್ದಳು, ಅಲ್ಲದೆ ಆ ಯುವಕನೊಂದಿಗೆ ಕೆಲ ಆತ್ಮೀಯ ಕ್ಷಣಗಳನ್ನ ಕಳೆದಿದ್ದಾಳೆ, ಈ ನಡುವೆ ಯುವತಿ ಆತನ ಮೊಬೈಲ್ ನೋಡಲು ತೆಗೆದುಕೊಂಡಿದ್ದಾಳೆ. ಈ ವೇಳೆ ಗ್ಯಾಲರಿಯನ್ನು ನೋಡಿದಾಗ ಆಕೆಗೆ ಶಾಕ್ ಆಗಿದ್ದು,ಆಕೆಯ ನಗ್ನ ಚಿತ್ರಗಳು ಸೇರಿದಂತೆ 13 ಸಾವಿರ ವಿವಿಧ ಮಹಿಳೆಯ ಪೋಟೋಗಳು ಅದರಲ್ಲಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ಆತನೊಂದಿಗೆ ಸ್ನೇಹವನ್ನು ಕಡಿದುಕೊಂಡು, ಬಿಪಿಓ ದ ಮುಖ್ಯಸ್ಥರಿಗೆ ಮಾಹಿತಿ ತಿಳಿಸಿದ್ದಾಳೆ.

ಈ ನಡುವೆ ಬಿಪಿಓ ಮುಖ್ಯಸ್ಥರು ನವೆಂಬರ್ 23 ರಂದು ಆರೋಪಿ ಆದಿತ್ಯ ಸಂತೋಷ್ ಎಂಬಾತನ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಹಲವಾರು ಇತರ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಈ ಪೋಟೋಗಳು ಆಫೀಸ್ ನಲ್ಲಿರುವ ಬೇರೆ ಹೆಂಗಸರಿಗೆ ಯಾವ ಕೇಡು ಮಾಡದಿದ್ದರೂ ಅವನ ಉದ್ದೇಶ ಯಾರಿಗೂ ಗೊತ್ತಿರಲಿಲ್ಲ. ಒಂದು ವೇಳೆ ಫೋಟೋಗಳು ಲೀಕ್ ಆಗಿದ್ದರೆ ಅದು ದೊಡ್ಡ ಆಘಾತವುಂಟು ಮಾಡುತ್ತಿತ್ತು ಎಂದು ಸಂಸ್ಥೆ ಹೇಳಿದ್ದು, ಸಂತೋಷ್ ಕಳೆದ ಐದು ತಿಂಗಳಿನಿಂದ ಗ್ರಾಹಕ ಸೇವಾ ಏಜೆಂಟ್ ಆಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಛಾಯಾಚಿತ್ರಗಳನ್ನು ಮಾರ್ಫ್ ಮಾಡಲು ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಂತೋಷ್ ವಿರುದ್ಧ ಪ್ರಕರಣವನ್ನು ಕೈಗೆತ್ತಿಕೊಂಡು ಆತನ ಕಚೇರಿಯಿಂದಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ಅವರು ಇಷ್ಟೊಂದು ಫೋಟೋಗಳನ್ನು ಏಕೆ ಇಟ್ಟುಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಮಗೆ ಸ್ವಲ್ಪ ಸಮಯ ಬೇಕು. ಅವುಗಳಲ್ಲಿ ಕೆಲವು ಮಾರ್ಫ್ ಆಗಿವೆ ಮತ್ತು ಕೆಲವು ನೈಜವಾಗಿವೆ. ಅವರನ್ನು ಬಳಸಿಕೊಂಡು ಯಾವುದೇ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅವರ ಚಾಟ್ ಇತಿಹಾಸ ಮತ್ತು ಫೋನ್ ಕರೆಗಳು ಸಹ ಪರಿಶೀಲನೆಯಲ್ಲಿವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *