Connect with us

    KARNATAKA

    ನೈಋತ್ಯ ರೈಲ್ವೆಯ 13 ಸಿಬ್ಬಂದಿಗೆ ಜನರಲ್ ಮ್ಯಾನೇಜರ್ ಸುರಕ್ಷತಾ ಪ್ರಶಸ್ತಿಯ ಗೌರವ 

    ಹುಬ್ಬಳ್ಳಿ: ರೈಲ್ವೆ ಸುರಕ್ಷತೆಯನ್ನು ಖಾತ್ರಿಪಡಿಸುವ ಈ ನಿರ್ಣಾಯಕ ಚರ್ಚೆಯ ನಂತರ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ವಲಯದ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಿದರು.

    ಹುಬ್ಬಳ್ಳಿಯ  ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ  ಅರವಿಂದ್ ಶ್ರೀವಾಸ್ತವ ಅವರು ಮಂಗಳವಾರ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.

    ಅಪಾಯಕಾರಿ ಸಂದರ್ಭಗಳು ಗಂಭೀರ ಅಪಘಾತಗಳಾಗಿ ಬದಲಾಗುವ ಮೊದಲು ಅದನ್ನು ನಿಲ್ಲಿಸಲು ನೌಕರರು ತ್ವರಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಆಯಾ ವಿಭಾಗಗಳಿಂದ ಪಟ್ಟಿ ಮಾಡಲಾಗಿದೆ:

     ಹುಬ್ಬಳ್ಳಿ ವಿಭಾಗ:

    1. ಶ್ರೀ ನಾರಾಯಣ್ ನಾಯಕ್ (ಸಹಾಯಕ, ಕ್ಯಾಸಲ್ ರಾಕ್)
    2. ಶ್ರೀ ವಿನಯ್ ಕುಮಾರ್ ಚೌಧರಿ (ಸಹಾಯಕ, ಕ್ಯಾಸಲ್ ರಾಕ್)
    3. ಶ್ರೀ ಪ್ರಬೀಶ್ ಪಿ. (ಲೋಕೋ ಪೈಲಟ್, ವಾಸ್ಕೋ ಡ ಗಾಮಾ)
    4. ಶ್ರೀ ವಿಶ್ವನಾಥ್ ಮಂಜುನಾಥ್ (ಹಿರಿಯ ಸಹಾಯಕ ಲೋಕೋ ಪೈಲಟ್, ವಾಸ್ಕೋ ಡ ಗಾಮಾ)
    5. ಶ್ರೀ ಆರ್.ವಿ.ಹುಗ್ಗಿ ( ಹೆಡ್ ಕಾನ್ಸ್ಟೇಬಲ್, ಆರ್ ಪಿಎಫ್ ಗದಗ)
    6. ಶ್ರೀ ಸುಶೀಲ್ ಕುಮಾರ್ (ಕಾನ್ಸ್ಟೇಬಲ್, ಆರ್ ಪಿಎಫ್ ಪೋಸ್ಟ್ ಬೆಳಗಾವಿ).

     ಬೆಂಗಳೂರು ವಿಭಾಗ:

    1. ಶ್ರೀ ಲಕ್ಷ್ಮೀಕಾಂತ ಎನ್.ವಿ (ಗೇಟ್ ಕೀಪರ್)
    2. ವಿಜಯ್ ಕುಮಾರ್ ಮೊಹೌರ್ (ಲೋಕೋ ಪೈಲಟ್)
    3. ಶ್ರೀ ಸಾಕೆ ರಾಜೇಶ್ (ಹಿರಿಯ ಸಹಾಯಕ ಲೋಕೋ ಪೈಲಟ್)
    4. ಶ್ರೀ ನಾಗರಾಜ್ (ಟೆಕ್ನಿಷಿಯನ್)

     ಮೈಸೂರು ವಿಭಾಗ:

    1. ಶ್ರೀ ಸುಭಾಷ್ ಚಂದ್ರ ಗುಪ್ತಾ (ಗೇಟ್ ಮ್ಯಾನ್)
    2. ಶ್ರೀ ರಾಮಗೋಪಾಲಾಚಾರಿ (ಗ್ಯಾಂಗ್ ಮೇಟ್)
    3. ಶ್ರೀ ಪೂರ್ಣ್ ಸಿಂಗ್ ಮೀನಾ (ಟ್ರೈನ್ ಮ್ಯಾನೇಜರ್)

    ಅರವಿಂದ್ ಶ್ರೀವಾಸ್ತವ ಅವರು ಈ ಉದ್ಯೋಗಿಗಳ ಅತ್ಯುತ್ತಮ ಜಾಗರೂಕತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು, ನೈಋತ್ಯ ರೈಲ್ವೆಯಲ್ಲಿ ಸುರಕ್ಷತೆಯು ಉನ್ನತ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply