LATEST NEWS
ಸತತ 10ನೇ ದಿನ ತೈಲ ಬೆಲೆ ಏರಿಕೆ…ಹಿಂದಿನ ಸರಕಾರಗಳೇ ಕಾರಣ ಎಂದರು ಪ್ರಧಾನಿ
ಹೊಸದಿಲ್ಲಿ ಫೆಬ್ರವರಿ 18: ಸತತ 10 ನೇ ದಿನವೂ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ ಮುಂದುವರೆದಿದೆ. 10ನೇ ದಿನವಾದ ಇಂದು ಪೆಟ್ರೋಲ್‌ಗೆ 34 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 32 ಪೈಸೆ ಏರಿಕೆ ಕಂಡಿದೆ.
ಇನ್ನು ಇಂದು ತೈಲ ದರ 34 ಹಾಗೂ 32 ಪೈಸೆ ಹೆಚ್ಚಳವಾಗುವ ಮೂಲಕ ಸಾರ್ವಕಾಲಿಕವಾಗಿ ದಾಖಲೆಯತ್ತ ತೈಲದ ಬೆಲೆ ಏರಿದೆ. ಕಳೆದ 9 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ 2.95 ರೂ. ಏರಿದರೆ, 3.38 ರೂ. ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಇನ್ನೊಂದೆಡೆ ರಾಜಸ್ಥಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ಗಡಿಯನ್ನು ದಾಟಿದೆ. ದೇಶದಲ್ಲಿ ಪೆಟ್ರೋಲ್ ದರ ಶತಕ ದಾಟಿರುವುದು ಇದೇ ಮೊದಲು.
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳು ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: 92.89 ರೂ, ಡೀಸೆಲ್: 85.09 ರೂ, ಹೊಸದಿಲ್ಲಿ ಪೆಟ್ರೋಲ್: 89.88 ರೂ, ಡೀಸೆಲ್: 80.27 ರೂ, ಮುಂಬಯಿ ಪೆಟ್ರೋಲ್: 96.32 ರೂ.
ಡೀಸೆಲ್: 87.32 ರೂ. ಚೆನ್ನೈ ಪೆಟ್ರೋಲ್: 92.02 ರೂ. ಡೀಸೆಲ್: 85.33 ರೂ
ಪೆಟ್ರೋಲ್, ಡೀಸೆಲ್ ಏರಿಕೆಯಾದ್ರೂ ಪ್ರಧಾನಿ ಮೋದಿ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ನಿನ್ನೆ ಮೊದಲ ಬಾರಿಗೆ ಪೆಟ್ರೋಲ್ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಹಿಂದಿನ ಸರ್ಕಾರಗಳೆ ಹೊಣೆ ಎಂದಿದ್ದಾರೆ. ಅಲ್ಲದೆ ಹಿಂದಿನ ಸರ್ಕಾರಗಳು ಇಂಧನ ಆಮದಿನ ಅವಲಂಬನೆ ಕಡಿಮೆ ಮಾಡುವತ್ತ ಗಮನ ಹರಿಸಿದ್ದರೆ, ಈಗ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ ಎಂದಿದ್ದಾರೆ. ಇನ್ನೂ ದೇಶದಾದ್ಯಂತ ಏಕರೂಪದ ದರ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ನೈಸರ್ಗಿಕ ಅನಿಲವನ್ನ ಜಿಎಸ್‌ಟಿ ವ್ಯಾಪ್ತಿಗೆ ತರಲು ಭಾರತ ಬದ್ಧವಾಗಿದೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ.