Connect with us

LATEST NEWS

ಅನ್ಯಧರ್ಮದ ಯುವಕರೊಂದಿಗೆ ತಿರುಗಾಡುತ್ತಿದ್ದ ಯುವತಿಯರು…ಯುವಕ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

ಮಂಗಳೂರು ಫೆಬ್ರವರಿ 18: ಅನ್ಯಧರ್ಮದ ಯುವಕರೊಂದಿಗೆ ತಿರುಗಾಡುತ್ತಿದ್ದ ಇಬ್ಬರು ಹಿಂದೂ ಹುಡುಗಿಯರನ್ನು ರಾಮ್ ಸೇನಾ ಶಿವಾಜಿ ಘಟಕದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.


ಮಂಗಳೂರು ನಗರದ ಕಾಲೇಜಿನ ಇಬ್ಬರು ಹಿಂದೂ ಹುಡುಗಿಯರು ಅನ್ಯ ಕೋಮಿನ ಮೂರು ಹುಡುಗರ ಜೊತೆ ಎಕ್ಕಾರಿನ ಕಲ್ಲಿನ ಕೋರೆಯ ಪಕ್ಕ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದ್ದು, ರಾಮ್ ಸೇನಾ ಶಿವಾಜಿ ಘಟಕದ ಕಾರ್ಯಕರ್ತರು ಮೋಜು ಮಸ್ತಿಯಲ್ಲಿದ್ದ ಯುವತಿಯರು ಮತ್ತು ಯುವಕರನ್ನು ಪತ್ತೆ ಮಾಡಿ ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರು ಮಂಗಳೂರು ಮೂಲದವರೆಂದು ತಿಳಿದು ಬಂದಿದ್ದು, ಯುವತಿಯರು ಬೆಂಗಳೂರಿನವರೆಂದು ಹೇಳಲಾಗಿದೆ.


ಪೊಲೀಸರು ಯುವಕ, ಯುವತಿಯರ ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.