Connect with us

    FILM

    ತಮಿಳು ಚಿತ್ರನಟ ಸೂರ್ಯ ಮೇಲೆ ಹಲ್ಲೆ ಮಾಡಿದವರಿಗೆ 1 ಲಕ್ಷ ರೂಪಾಯಿ!

    ಚೆನ್ನೈ, ನವೆಂಬರ್ 15: ಚಿತ್ರನಟ ಸೂರ್ಯ ಅಭಿನಯಿಸಿರುವ 1995ರ ನೈಜ ಘಟನೆ ಆದರಿಸಿದ ಕಥೆಯಿದು. ಇಲಿ, ಹಾವು ಹಿಡಿದು, ಇಟ್ಟಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ಧ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸ ಇರುವ ತಮಿಳಿನ ‘ಜೈ ಭೀಮ್’ ಚಿತ್ರ ಇದಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದು ಒಟಿಟಿಯಲ್ಲಿ ಬಿಡುಗಡೆಯಾದಂದಿನಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ.

    ಜ್ಞಾನವೇಲ್ ನಿರ್ದೇಶನದ, ಸೂರ್ಯ ಅವರು ನಿರ್ಮಾಣ ಮಾಡಿ ನಟಿಸಿರುವ ಈ ಚಿತ್ರದ ವಿರುದ್ಧ ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅದೇನೆಂದರೆ ಚಿತ್ರದ ಖಳನಾಯಕನ ಪಾತ್ರಕ್ಕೆ ಪಿಎಂಕೆ (Pattali Makkal Katchi) ನಾಯಕರಾಗಿದ್ದ ಕಾಡುವೆಟ್ಟಿ ಗುರು ಹೆಸರು ಇಟ್ಟಿರುವುದು.

    ನಿಧನರಾಗಿರುವ ತಮ್ಮ ಪಕ್ಷದ ವರಿಷ್ಠ ಕಾಡುವೆಟ್ಟಿ ಗುರು ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಇಡಲಾಗಿದೆ. ಈ ಮೂಲಕ ವನ್ನಿಯರ್ ಜಾತಿಯನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸಲಾಗಿದೆ. ಈ ಹೆಸರಿನಿಂದ ವನ್ನಿಯರ್ ಮತ್ತು ಇತರ ಜಾತಿಗಳ ಜನರ ನಡುವಿನ ಸಾಮರಸ್ಯ ಹಾಳಾಗುವಂತೆ ಮಾಡಲಾಗಿದೆ. ಜಾತಿ ಗಲಭೆ ಹೆಚ್ಚಿಸುವ ಸಲುವಾಗಿ ಸೂರ್ಯ ಈ ರೀತಿ ಮಾಡಿದ್ದಾರೆ ಎನ್ನುವುದು ಅವರ ಆರೋಪ.

    ಈ ಸಂಬಂಧ ಪಿಎಂಕೆ ಜಿಲ್ಲಾ ಕಾರ್ಯದರ್ಶಿ ಸೀತಮಲ್ಲಿ ಪಝನಿ ಸಾಮಿ ಅವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನಟ ಸೂರ್ಯ ಮೇಲೆ ಹಲ್ಲೆ ಮಾಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಜತೆಗೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳುವಂತೆ ಮೈಲಾಡುತುರೈ ಪೊಲೀಸ್ ವರಿಷ್ಠಾಧಿಕಾರಿ ಸುಗುಣಾ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಇದೀಗ ಸೂರ್ಯ ಅವರು ನಟಿಸಿರುವ ‘ವೆಲ್’ ಚಿತ್ರವನ್ನೂ ಬ್ಯಾನ್ ಮಾಡಲಾಗಿದ್ದು, ಪಿಎಂಕೆ ಪಕ್ಷದ ಸದಸ್ಯರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರದರ್ಶನಗಳನ್ನು ನಿಲ್ಲಿಸಿದ್ದಾರೆ. ಈ ಜಿಲ್ಲೆಯಲ್ಲಿ ಸೂರ್ಯನ ಯಾವುದೇ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply