LATEST NEWS
ಮೇಯರ್ ಕವಿತಾ ಸನೀಲ್ ನಗರ ದರ್ಶನ…!!!
ಮಂಗಳೂರು, ಜುಲೈ 27: ಲೇಡಿ ಸಿಂಗಂ ಮಂಗಳೂರು ಮೇಯರ್ ಕವಿತಾ ಸನಿಲ್ ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ನಗರದಲ್ಲಿ ಸಂಚಾರಿಸಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ವತಾ ಪರಾಮರ್ಶೆ ಮಾಡಿಕೊಂಡರು. ಡಿಸಿಪಿ ಹನುಮಂತರಾಯ ಮತ್ತು ಸಂಚಾರಿ ಎಸಿಪಿ ತಿಲಕ್ ಚಂದ್ರ ಅವರೊಂದಿಗೆ ಪಿವಿಎಸ್ ಸರ್ಕಲ್ ನಿಂದ ಸ್ಟೇಟ್ ಬ್ಯಾಂಕ್ ತನಕ ನಗರ ದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಕೆಲವಡೆ ಅಂಗಡಿ ಮಾಲಿಕರು, ವ್ಯಾಪಾರಸ್ತರು ಅತಿಕ್ರಮಿಸಿ ಇಟ್ಟ ಸೊತ್ತುಗಳನ್ನು ಕಂದಾಯ ಅಧಿಕಾರಗಳ ಮೂಲಕ ಸ್ಥಳದಲ್ಲೇ ಜಪ್ತಿ ಮಾಡಿಸಿದರು. ಎಸಿ ರೂಮಿನಲ್ಲಿ ಕೂತುಕೊಳ್ಳದೆ ಪ್ರತೀ ತಿಂಗಳು ಬೀದಿಗಳಿದರೆ ನಗರದಲ್ಲಿನ ಸಮಸ್ಯೆಗಳನ್ನು ಅರಿಯಲು ಸಾಧ್, ಮಾತ್ರವಲ್ಲ ಸಮಸ್ಯೆ ಪರಿಹಾರಕ್ಕೂ ಸಾಧ್ಯ. ಪ್ರತಿಬಾರಿ ನಗರದ ಸಂಚಾರದ ಕುರಿತು ದೂರುಗಳು ಬರುತ್ತಿದ್ದು ಇದನ್ನು ನಿಯಂತ್ರಿಸಲು ಬೇಕಾದ ಎಲ್ಲಾ ದಿಟ್ಟ ಕ್ರಮಗಳನ್ನು ಪಾಲಿಕೆ ತೆಗೆದುಕೊಳ್ಳಲಿದೆ ಎಂದ ಮೇಯರ್ ನಗರದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ತೆರವುಗಳಿಸಲು ನಿರ್ಧರಿಸಿದ್ದು, ಬೀದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕಾ ವ್ಯವಸ್ಥೆಯನ್ನು ಮಾಡಲಾಗಿದೆ ಅವರು ಪಾಲಿಕೆಯೊಂದಿಗೆ ಸಹಕಾರ ನೀಡದೆ ಸಮಸ್ಯೆ ಇನ್ನೂ ಬಿಗಡಾಯಿಸಿದ್ದು ಬೀದಿ ವ್ಯಾಪಾರಿಗಳು ರಸ್ತೆಯ ಫುಟ್ ಪಾತ್ ಗಳನ್ನು ಅತಿಕ್ರಮಿಸಿದರ ಪರಿಣಾಮ ಜನರಿಗೆ ನಡೆದಾಡಲು ಕಷ್ಟವಾಗುತ್ತಿದೆ. ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.