LATEST NEWS
ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಮುಂದುವರಿದ ಅಘಾತಕಾರಿ ಟೀಕೆ, ಮಂಡಿಯೂರಿ ಕುಳಿತ ಜಿಲ್ಲಾ ಪೋಲೀಸ್ ಇಲಾಖೆ
ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಮುಂದುವರಿದ ಅಘಾತಕಾರಿ ಟೀಕೆ, ಮಂಡಿಯೂರಿ ಕುಳಿತ ಜಿಲ್ಲಾ ಪೋಲೀಸ್ ಇಲಾಖೆ
ಮಂಗಳೂರು, ನವಂಬರ್ 12: ಸಾದಾ ಒಂದಿಲ್ಲೊಂದು ಸಾಮರಸ್ಯ ಕೆದಡುವ, ಕೋಮುದ್ವೇಷ ಹರಡುವ ಸಂದೇಶಗಳನ್ನು ಹಾಗೂ ಪೋಸ್ಟ್ ಗಳನ್ನು ಹಾಕಿ ವಿವಾದ ಸೃಷ್ಟಿಸುವ ಮಂಗಳೂರು ಮುಸ್ಲಿಂ ಎನ್ನುವ ಫೇಸ್ಬುಕ್ ಪೇಜ್ ಗೆ ಇತ್ತೀಚಿನ ದಿನಗಳಲ್ಲಿ ಲಂಗು ಲಗಾಮೇ ಇಲ್ಲದಂತಾಗಿದೆ. ಈ ಪೇಜ್ ನಲ್ಲಿ ತನಗೆ ತೋಚಿದ್ದನ್ನು ಗೀಜುವ ಇದರ ಅಡ್ಮಿನ್ ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೃತ್ಯದಲ್ಲಿ ತೊಡಗಿದ್ದಾನೆ.
ಬದುಕಿದ್ದಾಗ ಒಬ್ಬ ವ್ಯಕ್ತಿಯನ್ನು ದೂಷಿಸುವ ಗೇಲಿ ಮಾಡಲಾಗುತ್ತಾದರೂ, ಸತ್ತ ಬಳಿಕ ಆತನ ಬಗ್ಗೆ ಬಹಿರಂಗವಾಗಿ ಮಾತನಾಡೋದು ಕಡಿಮೆಯೇ. ಆದರೆ ಈ ಪೇಜ್ ನಲ್ಲಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ಹಾಗೂ ಸಮಾಜದಲ್ಲಿ ಗಣ್ಯ ವ್ಯಕ್ತಿತ್ವ ಹೊಂದಿದವರ ವಿರುದ್ಧ ಅವಮಾನಕಾರಿ ಹಾಗೂ ಅವಹೇಳನಕಾರಿಯಾಗಿ ಬರೆಯಲಾಗುತ್ತಿದೆ.
ಸದಾ ಹಿಂದೂ ಸಮಾಜದ ವಿರುದ್ಧ ಟೀಕೆ ಮಾಡುವ ಹಾಗೂ ಹಿಂದೂ ದೇವ-ದೇವತೆಗಳ ವಿರುದ್ಧ ಅಶ್ಲೀಲವಾದ ಪೋಸ್ಟ್ ಹಾಗೂ ಕಮೆಂಟ್ ಗಳನ್ನು ಮಾಡಿಕೊಂಡು ಬಂದಿರುವ ಈ ಫೇಸ್ಬುಕ್ ಪೇಜ್ ನ ಅಡ್ಮಿನ್ ವಿರುದ್ಧ ಈ ಹಿಂದೆಯೂ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಲಾಗುತ್ತಿದೆ.
ಆದರೆ ಈ ವರೆಗೂ ಈ ಪೇಜನ್ನು ಪ್ರತಿದಿನವೂ ಅಪ್ಡೇಟ್ ಮಾಡುತ್ತಿರುವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲು ಪೋಲೀಸರಿಗೆ ಸಾಧ್ಯವಾಗಿಲ್ಲ.
ಇತ್ತೀಚೆಗೆ ವಿಧಿವಶರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವರ ವಿರುದ್ಧ ಕೋಮುವಾದಿ ಚಿಂತನೆಯ ಟೀಕೆಗಳನ್ನು ಮಾಡಿಕೊಂಡು ಬರುತ್ತಿರುವ ಈ ಪೇಜ್ ನಲ್ಲಿ ಮತ್ತೆ ಇಂಥಹುದೇ ಪೋಸ್ಟ್ ಗಳು ಮೂಡಿ ಬರಲಾಂಭಿಸಿದೆ.
ಆನಾರೋಗ್ಯದಿಂದ ಮೃತಪಟ್ಟ ಕೇಂದ್ರ ಸಚಿವ ಅನಂತ್ ಕುಮಾರ್ ವಿರುದ್ಧ ಇದೀಗ ತಿರುಗಿ ಬಿದ್ದಿರುವ ಈ ಪೇಜ್ ಅಡ್ಮಿನ್ ಮತ್ತೆ ತನ್ನ ಕೋಮುವಾದಿ ಚಿಂತನೆಗಳನ್ನು ಹರಿಯಬಿಟ್ಟಿದ್ದಾನೆ.
ಈತನ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈತನ ವಿರುದ್ಧ ಕ್ರಮ ಜರುಗಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಕೆದಡುವಂತಹ ಪ್ರಕ್ರಿಯೆಗಳಲ್ಲಿ ಭಾಗಿಯಾಗುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಇಲಾಖೆಯಿಂದ ಎಚ್ಚರಿಕೆ ಮಾತ್ರ ಪ್ರತಿ ತಿಂಗಳೂ ಪತ್ರಿಕೆಗಳಲ್ಲಿ ಬರುತ್ತಿದ್ದು, ಯಾವುದೇ ಕ್ರಮ ಮಾತ್ರ ಆಗಿಲ್ಲ.
ಆದರೆ ಇಂಥಹುದೇ ವೈಯುಕ್ತಿಕ ರೀತಿಯ ಕಮೆಂಟ್ ಗಳಲ್ಲಿ ಜನಪ್ರತಿನಿಧಿಯಾಗಲೀ, ಅಧಿಕಾರಿಗಳ ವಿರುದ್ಧವಾಗಿ ಮಾಡಿದ ತಕ್ಷಣ ಕಿವಿಗೆ ಗಾಳಿ ಹೊಕ್ಕವರಂತೆ ಆರೋಪಿಗಳನ್ನೂ, ಅಮಾಯಕರನ್ನೂ ಮನೆಯಿಂದ ಎತ್ತಿ ತರುವ ಪೋಲೀಸರಿಗೆ ಮಂಗಳೂರು ಮುಸ್ಲಿಂ ಎನ್ನುವ ಫೇಸ್ಬುಕ್ ಪೇಜ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.
ಒಂದು ಸಮುದಾಯದ ಅತಿಯಾದ ಓಲೈಕೆ ಮಾಡುತ್ತಿರುವ ಸರಕಾರ ಇವರ ಕೈ ಕಟ್ಟಿ ಹಾಕಿದೆಯೋ ಅಥವಾ ತಮ್ಮ ಕೈಯನ್ನು ತಾವೇ ಕಟ್ಟಿ ಕುಳಿತಿದ್ದಾರೋ ಎನ್ನುವ ಆಕ್ರೋಶದ ನುಡಿಗಳೂ ಸಾರ್ವಜನಿಕ ವಲಯದಿಂದ ಕೇಳಿ ಬರಲಾಂಭಿಸಿದೆ.