ಅನಂತಕುಮಾರ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ : ಸಚಿವ ಖಾದರ್

ಮಂಗಳೂರು , ನವೆಂಬರ್ 12 : ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಕಾಲಿಕ ಅಗಲಿಕೆಗೆ ಮಂಗಳೂರಿನಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಚಿವರು ಅನಂತ್ ಕುಮಾರ್ ಹಲವಾರು ವಿಚಾರದಲ್ಲಿ ತಮಗೆ ಸಲಹೆ ನೀಡಿದ್ದನ್ನು ಸ್ಮರಿಸಿದರು.

ರಾಜ್ಯದ ಧೀಮಂತ ನಾಯಕರಲ್ಲಿ ಅನಂತ್ ಕುಮಾರ್ ಒಬ್ಬರು.ಆರೋಗ್ಯ ಮಂತ್ರಿಯಾಗಿದ್ದಾಗ ಅನಂತ್ ಕುಮಾರ್ ನನಗೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದರು.

ಅನಂತ್ ಕುಮಾರ್ ಅಗಲಿಕೆ ತುಂಬಾ ದುಃಖ ತಂದಿದೆ. ಮತ್ತು ಅವರ ಅಗಲುವಿಕೆ ರಾಜ್ಯಕ್ಕೆ ಭರಿಸಲಾರದ ನಷ್ಟವಾಗಿದೆ ಎಂದು ತಮ್ಮ ಸಂತಾಪಲ್ಲಿ ಹೇಳಿದ್ದಾರೆ.

2 Shares

Facebook Comments

comments