LATEST NEWS
ಪಡೀಲ್ ರೈಲ್ವೆ ಕೆಳ ಸೇತುವೆ ಉದ್ಘಾಟನೆ

ಪಡೀಲ್ ರೈಲ್ವೆ ಕೆಳ ಸೇತುವೆ ಉದ್ಘಾಟನೆ
ಮಂಗಳೂರು ನವೆಂಬರ್ 15: ರಾಷ್ಟ್ರೀಯ ಹೆದ್ದಾರಿ 75ರ ಪಡೀಲು ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈಲ್ವೇ ಕೆಳಸೇತುವೆಯನ್ನು ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಲೋಕಾರ್ಪಣೆ ಮಾಡಿದರು.
ಸುಮಾರು 16.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕೆಳ ಸೇತುವೆ ನಿರ್ಮಾಣವಾಗಿದೆ. ನಂತರ ಮಾತನಾಡಿದ ಅವರು ಸುರತ್ಕಲ್- ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯನ್ನು ಸಾಗರ್ ಮಾಲ ಯೋಜನೆಯಡಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಇದಕ್ಕೆ ಕೇಂದ್ರ ಸರಕಾರ ಈಗಾಗಲೇ ಮಂಜೂರಾತಿ ನೀಡಿದೆ ಎಂದರು.
