BANTWAL
ಧರ್ಮಸ್ಥಳ ಆಣೆ ಪ್ರಮಾಣಕ್ಕೆ ಸಿದ್ದ, ಪೂಜಾರಿ ವಿಚಾರದಲ್ಲಿ ನನ್ನ ತೇಜೋವಧೆಯಾಗುತ್ತಿದೆ :ಸಚಿವ ರೈ
ಧರ್ಮಸ್ಥಳ ಆಣೆ ಪ್ರಮಾಣಕ್ಕೆ ಸಿದ್ದ, ಪೂಜಾರಿ ವಿಚಾರದಲ್ಲಿ ನನ್ನ ತೇಜೋವಧೆಯಾಗುತ್ತಿದೆ :ಸಚಿವ ರೈ
ಬಂಟ್ವಾಳ, ಡಿಸೆಂಬರ್ 31: ಜನಾರ್ದನ ಪೂಜಾರಿ ಅವರ ವಿಚಾರದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಸಚಿವ ಬಿ. ರಮಾನಾಥ ರೈ ತಮ್ಮ ಅಳಲು ತೋಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡ್ ನಲ್ಲಿ ನೂತನ ಕಾಂಗ್ರೆಸ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿಗೆ ಅವಹೇಳನ ವಿಚಾರದಲ್ಲಿ ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವರು ನಾನು ಜನಾರ್ಧನ ಪೂಜಾರಿಯವರಿಗೆ ಬೈದಿಲ್ಲ. ದುರುದ್ದೇಶಪೂರಿತವಾಗಿ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ನಾನು ಸಿದ್ದನಿದ್ದೇನೆ.
ಪೂಜಾರಿಯವರ ಕುಟುಂಬ, ಮಕ್ಕಳು ಧರ್ಮಸ್ಥಳದಲ್ಲಿ ಪ್ರಮಾಣಕ್ಕೆ ಕರೆದರೆ ನಾಳೆ ಬರುತ್ತೇನೆ. ಜನಾರ್ದನ ಪೂಜಾರಿಯವರ ಕುಟುಂಬದವರು ನನಗೆ ಬಹಳಷ್ಟು ಪ್ರೀತಿ ತೋರಿಸಿದ್ದಾರೆ. ಅವರ ಮಕ್ಕಳು ಇಂದಿಗೂ ಅಂಕಲ್ ಎಂದು ಕರೆಯುತ್ತಾರೆ ಮತ್ತು ನನಗೆ ಮಾವನ ಸ್ಥಾನ ನೀಡಿದ್ದಾರೆ. ಅವಹೇಳನ ಕುರಿತ ವಿಚಾರವಾಗಿ ಪೂಜಾರಿ ಅವರಿಗೂ ವೈಯಕ್ತಿಕವಾಗಿ ಕಂಡು ಹೇಳಿದ್ದೇನೆ.
ಅವರು ಹಿರಿಯರು, ಅವರ ಮೇಲೆ ನನಗೆ ಅಪಾರ ಗೌರವ ಇದೆ. ಇದಕ್ಕೆಲ್ಲ ಮೂಲ ಕಾರಣ ಹರಿಕೃಷ್ಣ ಬಂಟ್ವಾಳ್. ಬಿಜೆಪಿಯಲ್ಲಿ ಸ್ಥಾನ ಗಟ್ಟಿ ಮಾಡಲು ಹರಿಕೃಷ್ಣ ಬಂಟ್ವಾಳ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಚಿವರು ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹರಿಕೃಷ್ಣ ಬಂಟ್ವಾಳ್ ವಿರುದ್ಧ ಧಿಕ್ಕಾರ ಕೂಗಿದರು.
ವಿಡಿಯೋಗಾಗಿ…