LATEST NEWS
ಮಂಗಳೂರಿನಲ್ಲಿ ಹೊಸ ವರ್ಷದ ಸ್ವಾಗತದ ಆಚರಣೆ ವೇಳೆ ಅಪಘಾತಗಳ ಸರಮಾಲೆ
ಮಂಗಳೂರಿನಲ್ಲಿ ಹೊಸ ವರ್ಷದ ಸ್ವಾಗತದ ಆಚರಣೆ ವೇಳೆಅಪಘಾತಗಳ ಸರಮಾಲೆ
ಮಂಗಳೂರು,ಜನವರಿ 01 : ಹೊಸ ವರ್ಷದ ಸ್ವಾಗತದ ಆಚರಣೆ ವೇಳೆಅಪಘಾತಗಳ ಸರಮಾಲೆ. ಐವರು ಪ್ರಯಾಣಿಸುತ್ತಿದ್ದ ಟಾಟ ಸುಮೋ ವಾಹನ ನಗರದ ಪಂಪ್ ವೆಲ್ ಕರ್ಣಾಟಕ ಬ್ಯಾಂಕ್ ಎದುರುಗಡೆ ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದೆ.
ಕುಂದಾಪುರದಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ಟಾಟ ಸುಮೋ ವಾಹನ ಎದುರುಗಡೆಯಿಂದ ವಿರುದ್ಧ ಧಿಕ್ಕಿನಲ್ಲಿ ಬಂದ ಬೈಕನ್ನು ತಪ್ಪಿಸುವ ಧಾವಂತದಲ್ಲಿ ರಸ್ತೆ ಮಧ್ಯವೇ ಪಲ್ಟಿಯಾಗಿದೆ.
ಸುಮೋ ವಾಹನದಲ್ಲಿದ್ದ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಸುಮೋ ವಾಹನದಲ್ಲಿದ್ದವರು ಎನ್ ಎಫ್ ಎಸ್ ಕಂಪೆನಿಯ ಕಾರ್ಮಿಕರಾಗಿದ್ದು, ಕುಂದಾಪುರದಲ್ಲಿ ಟೆಲಿಫೋನ್ ಕೇಬಲ್ ಕೆಲಸ ಮುಗಿಸಿ ಮಂಗಳೂರು ಕಡೆಗೆ ವಾಪಸ್ಸಾಗುತ್ತಿದ್ದಾಗ ಘಟನೆ ನಡೆದಿದೆ.
ಕಾರ್ಮಿಕರೆಲ್ಲರೂ ಕುಂದಾಪುರದಲ್ಲಿ ಕೇಬಲ್ ಎಳೆದು ಕೆಲಸ ಮುಗಿಸಿ ಮತ್ತೆ ರಾತ್ರಿ ಮಂಗಳೂರಿನಲ್ಲಿ ಕೆಲಸ ನಿರ್ವಹಿಸಲು ಬಂದಿದ್ದರು. ಆದರೆ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅಡ್ಡಾದಿಡ್ಡಿ ಬೈಕನ್ನು ಚಲಾಯಿಸಿ ಕಾರ್ಮಿಕರ ಅಪಘಾತಕ್ಕೆ ಕಾರಣರಾಗಿದ್ದಾರೆ.
ಮಂಗಳೂರು ಸಂಚಾರಿ ಮತ್ತು ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳ ನ್ನು ನಿಯಂತ್ರಿಸಿದರು. ರಾತ್ರೋರಾತ್ರಿ ಕ್ರೇನ್ ಮಾಲೀಕ ಹಾಗೂ ಆಪರೇಟರ್ ವಿವೇಕ್ ಅವರು ಕಾರನ್ನು ತೆರವುಗೊಳಿಸಿದ ಫಲವಾಗಿ, ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮತ್ತೊಂದೆಡೆ ನಗರದ ಪಿವಿಎಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಬಡಿದು ಸವಾರ ಗಂಭೀರ ಗಾಯಗೊಂಡಿರುವ ಘಟನೆಯೂ ನಡೆದದಿದೆ.ಗಾಯಾಳುವನ್ನು ನಗರದ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
You must be logged in to post a comment Login