ಉಡುಪಿ ಎಸ್ಪಿ ಡಾ. ಸಂಜೀವ ಪಾಟೀಲ್ ಎತ್ತಂಗಡಿ
ಡಿಸೆಂಬರ್ . 31 : ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ. ಸಂಜೀವ ಪಾಟೀಲ್ ಅವರಿಗೆ ಡಿಢೀರ್ ವರ್ಗಾವಣೆಯಾಗಿದೆ.
ಚಿತ್ರದುರ್ಗದಲ್ಲಿ ಹೆಚ್ಚುವರಿ ಎಸ್ ಪಿ ಯಾಗಿದ್ದ ಲಕ್ಷ್ಮಣ್ ನಿಂಬರ್ಗಿ ಅವರನ್ನು ಉಡುಪಿಯ ನೂತನ ಎಸ್ ಪಿಯಾಗಿ ನೇಮಕ ಮಾಡಲಾಗಿದೆ.
ಡಾ. ಸಂಜೀವ ಪಾಟೀಲ್ ಅವರನ್ನು ಬೆಂಗಳೂರು ನಗರ ಡಿಸಿಪಿಯಾಗಿ ( ಆಡಳಿತ ) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಮಾಡಿದೆ.
ಸಂಜೀವ ಪಾಟೀಲ್ ಅವರು ಇದೇ ಆಗಸ್ಟ್ ತಿಂಗಳಲ್ಲಿ ಎಸ್ ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಅದರೆ ಕೇವಲ 5 ತಿಂಗಳಲ್ಲಿ ಅವರ ಎತ್ತಂಗಡಿ ಆಗಿದೆ.
ಉಡುಪಿ ಜಿಲ್ಲಾಧಿಕಾರಿಗೂ ವರ್ಗಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಜನವರಿ 8 ಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಭೇಟಿ ಬಳಿಕ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ವರ್ಗಾವಣೆ ಆಗುವುದು ಬಹುತೇಕ ಖಚಿತವಾಗಿದೆ.
