LATEST NEWS
ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಸದ್ದು……
ಪುತ್ತೂರು,ಅಗಸ್ಟ್ 18: ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣವನ್ನು ಸುಪ್ರೀಂಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುತ್ತೂರಿನ ಅಪ್ರಾಪ್ತ ಬಾಲಕಿಗೆ ಬೆದರಿಕೆಯೊಡ್ಡಿ ಲವ್ ಜಿಹಾದ್ ಜಾಲಕ್ಕೆ ಸಿಕ್ಕಿಸುವ ಪ್ರಯತ್ನ ನಡೆದಿರುವ ಹಿನ್ನಲೆಯಲ್ಲಿ ಇದೀಗ ಬಾಲಕಿ ಪೋಷಕರು ಯುವಕನೋರ್ವನ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲವ್ ಜಿಹಾದ್ ಪ್ರಕರಣ ಇದೀಗ ರಾಷ್ಟ್ರದಾದ್ಯಂತ ಭಾರೀ ಚರ್ಚೆಯ ವಸ್ತುವಾಗಿದ್ದು, ಅದರಲ್ಲೂ ಕೇರಳ ರಾಜ್ಯದಲ್ಲಿ ಇದರ ಬೇರು ಬಲವಾಗಿ ಬೇರು ಬಿಟ್ಟಿದೆ. ಆದರೆ ಇದೀಗ ಈ ಲವ್ ಜಿಹಾದ್ ಕೇರಳದ ಪಕ್ಕದ ರಾಜ್ಯದಿಂದ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಈ ಹಿಂದೆಯೂ ಲವ್ ಜಿಹಾದ್ ನಂತಹ ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ. ಲವ್ ಜಿಹಾದ್ ನ ನೈಜ ಚಿತ್ರಣ ಜನತೆಯ ಮುಂದೆ ತೆರೆದಿಡುವ ಉದ್ಧೇಶದಿಂದಲೇ ಇದೀಗ ಸುಪ್ರೀಂಕೋರ್ಟ್ ಕೇರಳದಲ್ಲಿ ನಡೆದಂತಹ ಪ್ರಕರಣವೊಂದನ್ನು ರಾಷ್ಟ್ರೀಯ ತನಿಖಾ ತಳದ ಮೂಲಕ ತನಿಖೆಗೂ ಆದೇಶಿಸ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣವೊಂದು ಪತ್ತೆಯಾಗಿದೆ. ಪುತ್ತೂರು ತಾಲೂಕಿನ ಪಾಲ್ತಾಡು ಎಂಬಲ್ಲಿನ ಅಪ್ರಾಪ್ತ ಬಾಲಕಿಯೋರ್ವರು ನಿರ್ಜನ ಪ್ರದೇಶದಲ್ಲಿರುವ ತನ್ನ ಮನೆಗೆ ಶಾಲೆ ಬಿಟ್ಟು ಹೋಗುವ ಸಂದರ್ಭದಲ್ಲಿ ಆಕೆಯನ್ನು ಬೆಂಬತ್ತಿ ಬರುತ್ತಿದ್ದ ಹಕೀಮ್ ಎನ್ನುವ ಯುವಕ ತನ್ನ ಚಾಳಿಯನ್ನು ಪ್ರತಿದಿನ ಮುಂದುವರಿಸಿಕೊಂಡು ಹೋಗಿದ್ದಾನೆ. ಬಳಿಕ ಆಕೆಯ ತಾಯಿಯ ಮೊಬೈಲ್ ನಂಬರ್ ಸಂಗ್ರಹಿಸಿ ಬಾಲಕಿಯನ್ನು ಸಂಪರ್ಕಿಸಿದ್ದು, ತನ್ನನ್ನು ಲವ್ ಮಾಡಬೇಕು ಇಲ್ಲದೇ ಹೋದಲ್ಲಿ ನಿನ್ನ ತಂದೆಯ ಅಂಗಡಿಯನ್ನು ಹೊತ್ತಿಸಿ ಹಾಕುತ್ತೇವೆ. ಅಣ್ಣನನ್ನು ಮತ್ತು ತಂದೆಯನ್ನು ಕೊಲ್ಲುತ್ತೇವೆ ಎನ್ನುವ ಬೆದರಿಕೆಯನ್ನೊಡ್ಡಿದ್ದಾರೆ. ಈ ಬೆದರಿಕೆಗೆ ಹೆದರಿದ ಅಪ್ರಾಪ್ತ ಬಾಲಕಿ ಹಕೀಮ್ ನೊಂದಿಕೆ ಕೆಲವು ದಿನ ಪೋನ್ ನಲ್ಲಿ ಮೆಸೇಜ್ ಮಾಡಿದ್ದಾಳೆ. ಆ ಬಳಿಕ ಹಕೀಮ್ ಆಕೆಯೊಂದಿಗೆ ನೀನು ಬಳೆ ಹಾಕಬಾರದು, ತಲೆಗೆ ಹೂ ಮುಡಿಯಬಾರದು, ರಂಜಾನ್ ದಿನದಲ್ಲಿ ಉಪವಾಸ ಕೂರಬೇಕು, ನಿನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತೇನೆ ಎನ್ನುವ ರೀತಿಯಲ್ಲಿ ಮನಪರಿವರ್ತಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಅಲ್ಲದೆ ತನ್ನ ಇತರ ಸ್ನೇಹಿತೆಯರ ಮೊಬೈಲ್ ನಂಬರ್ ಕೂಡು ಅದನ್ನು ನನ್ನ ಸ್ನೇಹಿತರಿಗೆ ಕೊಡುತ್ತೇನೆ ಇಲ್ಲದೇ ಹೋದಲ್ಲಿ ನಿನ್ನ ಮನೆಯವರಿಗೆ ತೊಂದರೆ ಮಾಡುತ್ತೇನೆ ಎನ್ನುವ ರೀತಿಯಲ್ಲಿ ಬೆದರಿಸಿದ್ದಾನೆ. ಕಳೆದ ಅಗಸ್ಟ್ 14 ರಂದು ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದ ಬಳಿಕ ಬಾಲಕಿಯನ್ನು ವಿಚಾರಿಸಿದಾಗ ಕೇವಲ ಇಷ್ಟೇ ಅಲ್ಲ , ಹಕೀಮ್ ಬಾಲಕಿಯ ಕಿವಿಯ ಬೆಂಡೋಲೆಯನ್ನೂ ಲಪಟಾಯಿಸಿದ್ದಾನೆ. ಬಾಲಕಿಯ ಮನೆಯವರು ಮನೆ ಪಕ್ಕದಲ್ಲೇ ಹೊಸ ಮನೆಯೊಂದನ್ನು ಕಟ್ಟುತ್ತಿದ್ದು, ಇದಕ್ಕೆ ಕೆಂಪುಕಲ್ಲನ್ನು ಸಾಗಿಸುವ ವಾಹನದಲ್ಲಿ ಬರುತ್ತಿದ್ದ ಹಕೀಮ್ ಬಾಲಕಿಯನ್ನು ತನ್ನ ಬಲೆಗೆ ಬೀಳಿಸಿದ್ದಾನೆ. ಈ ಹಿನ್ನಲೆಯಲ್ಲಿ ಬಾಲಕಿ ಪೋಷಕರು ಬೆಳ್ಳಾರ್ ಪೋಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳು ಈ ಕೃತ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಈ ಸಂಘಟನೆಯಿಂದಾಗಿಯೇ ಇಂಥಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಎನ್ನುವ ಆರೋಪಗಳೂ ಇದೀಗ ಕೇಳಿಬರುತ್ತಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ಇಂಥಹುದೇ ಪ್ರಕರಣ ನಡೆದಿದ್ದು, ಈ ಜಾಲದಲ್ಲಿ ಸಿಲುಕಿದ ಯುವತಿಯರನ್ನು ಕೇರಳದಲ್ಲಿ ಮತಾಂತರಗೊಳಿಸುವ ಪ್ರಕ್ರಿಯೆಯೂ ನಡೆದಿದೆ.