Connect with us

    LATEST NEWS

    ಅಕ್ರಮ ಸಂಬಂಧ ಶಂಕೆ ಪತ್ನಿ ಕೊಲೆ

    ಮಂಗಳೂರು ಅಗಸ್ಟ್ 19: ಅಕ್ರಮ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ತಡರಾತ್ರಿ ನಡೆದಿದೆ .

    ನಗರದ ಕೊಟ್ಟಾರ ಚೌಕಿ ಎಂಬಲ್ಲಿ ಈ ಘಟನೆ ನಡೆದಿದೆ .ಇಲ್ಲಿಯ ಜೆ. ಬಿ . ಲೋಬೋ ರೋಡ್ ನಲ್ಲಿ ನೆಲೆಸಿದ್ದ ವಿಲಿಯಂ ಲೋಬೋ ಹಾಗೂ ಬ್ಲೊಸಂ ಲೋಬೋ ದಂಪತಿಗಳ ನಡುವೆ ನಿನ್ನೆ ರಾತ್ರಿ ಜಗಳ ನಡೆದಿದೆ ಜಗಳ ವಿಕೋಪಕ್ಕೆ ತಿರುಗಿದೆ.

    ಈ ಸಂದರ್ಭದಲ್ಲಿ ಪತಿ ವಿಲಿಯಂ ಲೋಬೋ ಪತ್ನಿ ಬ್ಲೊಸಂ ಲೋಬೋ ಅವರಿಗೆ ಅಕ್ರಮ ಸಂಬಂಧವಿದೆ ಎಂದು ಸಂಶಯ ವ್ಯಕ್ತಪಡಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.

    ಈ ಘಟನೆಯಲ್ಲಿ ಪತ್ನಿ ಬ್ಲೊಸಂ ಲೋಬೋ ಗಂಭೀರವಾದ ಗಾಯಗೊಂಡಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ .ಈ ಕುರಿತು ಮಾಹಿತಿ ಪಡೆದ ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಪತಿ ವಿಲಿಯಂ ಲೋಬೋ ಅವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply