LATEST NEWS
ಕಾಂಗ್ರೇಸ್ ಬ್ಯಾನರ್ ಗೆ ಹಾನಿ -ಬಿಜೆಪಿ ಕಾರ್ಯಕರ್ತರು ಧೈರ್ಯ ಇದ್ದರೆ ನೇರವಾಗಿ ಬಂದು, ತಮ್ಮ ಶೌರ್ಯ ತೋರಿಸಲಿ

ಮಂಗಳೂರು ಎಪ್ರಿಲ್ 22: ಬೆಳ್ತಂಗಡಿಯಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ವೇಳೆಗೆ ಕಟ್ಟಿದ್ದ ಬ್ಯಾನರ್‌ಗಳನ್ನು ವಿರೂಪಗೊಳಿಸಿರುವ ಬಿಜೆಪಿ ಕಾರ್ಯಕರ್ತರ ನಡೆ ಖಂಡನೀಯ. ಇದು ಹೇಡಿತನದ ಸಂಕೇತವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಕೆ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳುವ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಲ್ಲಿ ಬ್ಯಾನರ್‌ಗಳನ್ನು ಹಾಕಿದ್ದರು. ಈ ಬ್ಯಾನರ್‌ಗಳನ್ನು ಚೂರಿ ಹಾಕಿ ಹರಿದು ವಿರೂಪಗೊಳಿಸಲಾಗಿದೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಕೃತ್ಯಗಳು ನಡೆದಿವೆ. ಕಾಂಗ್ರೆಸ್ ಜನಪ್ರಿಯತೆ ಸಹಿಸಲಾಗದೆ ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಧೈರ್ಯ ಇದ್ದರೆ ನೇರವಾಗಿ ಬಂದು, ತಮ್ಮ ಶೌರ್ಯ ತೋರಲಿ’ ಎಂದು ಸವಾಲು ಹಾಕಿದರು. ‘ಜಿಲ್ಲೆಯಲ್ಲಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮಾತ್ರ. ಹೀಗಾಗಿ, ಇದು ಬಿಜೆಪಿ ಕಾರ್ಯಕರ್ತರ ಕೆಲಸ ಎಂಬುದು ಖಚಿತ’ ಎಂದರು.
