BANTWAL
ಕಲ್ಲಡ್ಕ ಶಾಲೆಗೆ ಅನ್ನದಾನ ಕಡಿತ ಮಾಡಿದ್ದು ನಾನೇ-ಸಚಿವ ರಮಾನಾಥ ರೈ ಸ್ಪಷ್ಟನೆ
ಕಲ್ಲಡ್ಕ ಶಾಲೆಗೆ ಅನ್ನದಾನ ಕಡಿತ ಮಾಡಿದ್ದು ನಾನೇ-ಸಚಿವ ರಮಾನಾಥ ರೈ ಸ್ಪಷ್ಟನೆ
ಬಂಟ್ವಾಳ,ಫೆಬ್ರವರಿ 27: ಕಲ್ಲಡ್ಕ ಶ್ರೀರಾಮ ಹಾಗೂ ಪುಣಚದ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದನ್ನು ಸಚಿವ ಬಿ.ರಮಾನಾಥ ರೈ ಸರ್ಮರ್ಥಿಸಿಕೊಂಡಿದ್ದಾರೆ.
ಬಂಟ್ವಾಳದಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ದೇವಸ್ಥಾನದ ಹುಂಡಿಗೆ ಭಕ್ತರು ಹಾಕುತ್ತಿದ್ದ ಹಣ ಎರಡು ಶಾಲೆಗೆ ಹೋಗುತ್ತಿತ್ತು.
ತಾಲೂಕಿನಲ್ಲಿ 332 ಅನುದಾನಿತ ಶಾಲೆಗಳಿವೆ.
ಆದರೆ ಈ ಎರಡು ಶಾಲೆಗಳಿಗೆ ಮಾತ್ರ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಸಂದಾಯ ಆಗುತ್ತಿತ್ತು.
ಈ ತಾರತಮ್ಯವೇಕೆ ಎಂದು ನಾನೇ ಅನುದಾನವನ್ನು ಕಡಿತಗೊಳಿಸಿದ್ದೇನೆ.
ಇದು ನಾನು ಮಾಡಿದ್ದು ತಪ್ಪಾ.
ಆ ಕೆಲಸ ಮಾಡಿದ್ದಕ್ಕೆ ನನಗೆ ಕೊಲ್ಲೂರು ಮೂಕಾಂಬಿಕೆಯ ಕೃಪೆಯಿದೆ ಎಂದು ಹೇಳಿದರು.
ಮುಂದಿನ ಚುನಾವಣೆ ರಾಮ ಮತ್ತು ಅಲ್ಲಾಹನ ನಡುವೆ ಎಂದಿದ್ದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತಿಗೆ ಸಚಿವ ರಮಾನಾಥ ರೈ ತಿರುಗೇಟು ನೀಡಿದ ಅವರು ನನ್ನನ್ನು ತಂದೆ ರಾಮೇಶ್ವರಕ್ಕೆ ಕರೆದೊಯ್ದು ಹೆಸರಿಟ್ಟಿದ್ದರು.
ಅಲ್ಲಿಯೇ ಸಮುದ್ರ ದಂಡೆಯಲ್ಲಿ ಬರೆಸಿ ಅಕ್ಷರಾಭ್ಯಾಸ ಮಾಡಿದ್ದರು. ನಾವು ನಿಜವಾದ ರಾಮಭಕ್ತರು.
ಇವರೆಲ್ಲ ತೋರಿಕೆಗಾಗಿ ಮತ್ತು ಓಟಿಗಾಗಿ ರಾಮಭಕ್ತರು. ನಾಟಕದ ರಾಮಭಕ್ತರು.
ನಾನು ದಿನವೂ ಬೆಳಗ್ಗೆ ಎದ್ದು ರಾಮನ ಸ್ತುತಿ ಮಾಡುತ್ತೇನೆ ಎನ್ನುತ್ತಾ ರಾಮಾಯಣದ ಶ್ಲೋಕ ಹೇಳಿ ಸೇರಿದ್ದವರನ್ನು ದಂಗು ಬಡಿಸಿದರು.