BANTWAL
ಹೊಳೆಯಲ್ಲಿ ಸ್ನಾನ ಮಾಡಲು ಹೋದ ಬಾಲಕರು ನೀರುಪಾಲು
ಹೊಳೆಯಲ್ಲಿ ಸ್ನಾನ ಮಾಡಲು ಹೋದ ಬಾಲಕರು ನೀರುಪಾಲು
ಬಂಟ್ವಾಳ ನವೆಂಬರ್ 7: ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಐವರು ಬಾಲಕರು ನೀರುಪಾಲಾದ ಘಟನೆ ಬಂಟ್ವಾಳ ತಾಲೂಕಿನ ಕುಪ್ಪೆಪದವು ಬಳಿಯ ಮುಲ್ಲರಪಟ್ಟಣ ಎಂಬಲ್ಲಿ ನಡೆದಿದೆ.
ಐವರು ಮಕ್ಕಳು ಪಲ್ಗುಣಿ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಹೊಳೆಯ ದಡದಲ್ಲಿ ಬಾಲಕರ ವಸ್ತ್ರಗಳು ಪ್ತತೆಯಾಗಿದೆ. ಈ ನಡುವೆ ಒರ್ವ ಬಾಲಕನ ಮೃತದೇಹ ಪತ್ತೆಯಾಗಿದ್ದು ಮೃತ ಬಾಲಕನನ್ನು ಅಸ್ಲಾಂ ಎಂದು ಗುರುತಿಸಲಾಗಿದೆ.
ಉಳಿದ ನಾಲ್ವರು ಬಾಲಕರಾದ ಅಜ್ಮಲ್, ರಮೀಜ್, ಸವಾದ್, ಮುದಾಸೀರ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಬಾಲಕರಿಗಾಗಿ ಸ್ಥಳದಲ್ಲಿ ಅಗ್ನಿಶಾಮಕದಳ ಪೊಲೀಸರಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
You must be logged in to post a comment Login