Connect with us

DAKSHINA KANNADA

ಲಿಫ್ಟ್ ನೊಳಗೆ ಸಿಲುಕಿದ ಕಾಂಗ್ರೆಸ್ ಕಾರ್ಯಕರ್ತರು: ರಕ್ಷಿಸಿದ ಅಗ್ನಿಶಾಮಕ ದಳ

Share Information

ಮಂಗಳೂರು, ಅಗಸ್ಟ್ 26: ಮಿತಿಗಿಂತ ಹೆಚ್ಚು ಜನರನ್ನು ಹೊತ್ತು ಸಾಗುತ್ತಿದ್ದ ಲಿಫ್ಟ್ ನಿಷ್ಕ್ರಿಗೊಂಡು ಜನರು ಲಿಫ್ಟ್ ನೊಳಗಡೆ ಸಿಲುಕಿದ ಘಟನೆ ಮಂಗಳೂರು ಮಲ್ಲಿಕಟ್ಟಾ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಬಳಿಕ ಈ  ದುರ್ಘಟನೆ ಸಂಭವಿಸಿದೆ. ಮಿತಿಗಿಂತ ಹೆಚ್ಚು ಜನರು ಲಿಫ್ಟ್  ನೊಳಗಡೆ ಸೇರಿದ್ದೇ ನಿಷ್ಕ್ರಿಯ ಗೊಳ್ಳಲು ಕಾರಣವೆಂದು ಪೋಲಿಸರು ಹೇಳಿದ್ದಾರೆ. ಈ ನಡುವೆ ಒಳಗಡೆ ಜನ ಜಾಸ್ತಿ ಇದ್ದ ಕಾರಣ ಉಸಿರಾಟದ ತೊಂದರೆಯಾಗಿ ಕಾರ್ಯಕರ್ತರು ಸಹಾಯಕ್ಕಾಗಿ ಚೀರಾಡುತಿದ್ದಾಗ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಕದ್ರಿ ಅಗ್ನಿ ಶಾಮಕ ದಳ ಮತ್ದತು ಪೋಲಿಸ್  ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾರ್ಯಕರ್ತರನ್ನು ರಕ್ಷಿಸಿದ್ದಾರೆ.ಯಾವುದೇ ಗಾಯಗಳಾದ ಅಥವಾ ಅಸ್ವಸ್ಥರಾದ ಬಗ್ಗೆ ವರದಿಯಾಗಿಲ್ಲ.

ವಿಡಿಯೋಗಾಗಿ ಕೆಳಗಿನ ಲಿಂಕನ್ನು ಒತ್ತಿರಿ..

 


Share Information
Advertisement
Click to comment

You must be logged in to post a comment Login

Leave a Reply