ಬದಿಯಡ್ಕ ಅಗಸ್ಟ್ 26: ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ಸಾಯಂಕಾಲ ಬಾಡೂರಿನಲ್ಲಿ ನಡೆದ ಗಣೇಶ ವಿಗ್ರಹ ಜಲಸ್ಥಂಭನ ಮೆರವಣಿಗೆಯ ಮೇಲೆ ಸಿಪಿಎಂ ದಾಳಿ ನಡೆಸಿದೆ.

ದಾಳಿಯ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು, ಮಕ್ಕಳು ಚೆಲ್ಲಾಪಿಲ್ಲಿಯಾಗಿ ಓಡಿದ್ದು ಈ ವೇಳೆ ಹಲವರು ಬಿದ್ದು ಗಾಯಗೊಂಡಿದ್ದಾರೆ.

ಸಿಪಿಎಂ ದಾಳಿಯಲ್ಲಿ ಗಾಯಗೊಂಡ ಮುಂಡಿತ್ತಡ್ಕ ನಿವಾಸಿಗಳಾದ ಸತೀಶ್, ಯೋಗೀಶ್, ಹೇಮಚಂದ್ರ, ಮುಗು ನಿವಾಸಿ ಅಜಿತ್ ಎಂಬಿವರನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಗಾಯಗೊಂಡವರ ಪೈಕಿ ಹೇಮಚಂದ್ರರ ಸ್ಥಿತಿ ಗಂಭೀರವಾಗಿದೆ. ಇವರ ತಲೆಗೆ ಮಾರಕ ಆಯುಧದಿಂದ ಇರಿಯಲಾಗಿದೆ.
ದಾಳಿ ವೇಳೆ ಪೋಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ದೂರಲಾಗಿದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯ ಮೇಲೆ ಸಿಪಿಎಂ ನಡೆಸಿದ ದಾಳಿಯನ್ನು ಹಿಂದು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ

2 Shares

Facebook Comments

comments