LATEST NEWS
ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸಲ್ಮಾನರಿಗೆ ಮದುವೆಯಾಗಲು ಹೆಣ್ಣು ಸಿಗಲ್ಲ – ಗೋಪಾಲ್ ಜೀ ಎಚ್ಚರಿಕೆ
ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸಲ್ಮಾನರಿಗೆ ಮದುವೆಯಾಗಲು ಹೆಣ್ಣು ಸಿಗಲ್ಲ – ಗೋಪಾಲ್ ಜೀ ಎಚ್ಚರಿಕೆ
ಉಡುಪಿ ನವೆಂಬರ್ 26: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ಕೊನೆಯ ದಿನ ಇಂದು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿಯ ಎಂಜಿಎಂ ಕಾಲೇಜಿ ಮೈದಾನದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದು, ಉಡುಪಿ ಸಂಪೂರ್ಣ ಕೇಸರಿಮಯವಾಗಿತ್ತು.
ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ವಿಶ್ವ ಹಿಂದೂ ಪುರಿಷತ್ ನ ಸಹ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಲವ್ ಜಿಹಾದ್ ವಿರುದ್ದ ಕಿಡಿಕಾರಿದರು. ಲವ್ ಜಿಹಾದ್ ಮೂಲಕ ಹೆಣ್ಣುಮಕ್ಕಳ ಜೀವನವನ್ನು ಹಾಳುಮಾಡಿ, ನರಕಕ್ಕೆ ತಳ್ಳಲಾಗುತ್ತದೆ ಎಂದು ಆರೋಪಿಸಿದರು. ನಮ್ಮ ತಂಗಿ ತಾಯಿಯರನ್ನು ನಾವೇ ರಕ್ಷಿಸಬೇಕಾದ ಅವಶ್ಯಕತೆ ಈ ಸಂದರ್ಭದಲ್ಲಿ ಇದೆ ಎಂದರು.
ಲವ್ ಜಿಹಾದ್ ನಿಲ್ಲಿಸಬೇಕೆಂದು ಮಸಲ್ಮಾನರಿಗೆ ಎಚ್ಚರಿಕೆ ನೀಡಿದ ಗೋಪಾಲ್ ಜೀ ಪ್ರೀತಿ ಪ್ರೇಮಕ್ಕೆ ಮುಸಲ್ಮಾನರಲ್ಲಿ ಸಾಕಷ್ಟು ಯುವತಿಯರಿದ್ದಾರೆ ಹಾಗೆ ಬಜರಂಗದಳದಲ್ಲಿಯೂ ಸಾಕಷ್ಟು ಜನ ಯುವಕರಿದ್ದಾರೆ ಎಂದು ಎಚ್ಚರಿಸಿದರು. ಲವ್ ಜಿಹಾದ್ ನಿಲ್ಲಿಸಿ ಇಲ್ಲವೇ ಮುಸಲ್ಮಾನರಿಗೆ ಮುದುವೆಯಾಗಲು ಒಂದು ಹೆಣ್ಣು ಸಿಗಲ್ಲ ಎಂದು ಎಚ್ಚರಿಸಿದರು. ಹಿಂದೂಗಳಿಗೆ ರಾಮನ ಆದರ್ಶವೂ ಇದೆ, ಕೃಷ್ಣನ ಆದರ್ಶವೂ ಗೊತ್ತು ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರಕ್ಕೆ ತಾಲಾಕೋಲೋ ಆಂದೋಲನಕ್ಕೆ ಚಾಲನೆ ನೀಡುವ ನೆಲ ಉಡುಪಿಯಾಗಿದೆ ಎಂದು ಅವರು ಕೆಲವರಿಗೆ ಧರ್ಮಸಂಸದ್ ಕೋಮುವಾದದಂತೆ ಕಾಣುತ್ತಿದೆ, ಆದರೆ ಇದು ಧರ್ಮಸಂಸದ್ ಹೊರತು ಕೋಮುವಾದದ ಕಾರ್ಯಕ್ರಮವಲ್ಲ ಎಂದರು.ಕರಾವಳಿಯ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲವ್ ಜಿಹಾದ್ ಹಾಗೂ ಮಂತಾಂತರ ಗಳು ನಡೆಯುತ್ತಿದೆ ಎಂದು ಹೇಳಿದ ಗೋಪಾಲ್ ಜೀ, ನಾವು ಪ್ರೀತಿ ಪ್ರೇಮವನ್ನು ವಿರೋಧಿಸುವುದಿಲ್ಲ, ಆದರೆ, ಈ ಪ್ರೇಮ ಕೇವಲ ನಾಟಕ, ರಾಷ್ಟ್ರದ್ರೋಹಿ ಕೃತ್ಯ ಎಂದರು.
You must be logged in to post a comment Login