Connect with us

MANGALORE

ರಸ್ತೆ ಮಧ್ಯೆ ಕಾಂಗ್ರೇಸ್ ಸಮಾವೇಶ – ಟ್ರಾಫಿಕ್ ಕಿರಿಕಿರಿಯಲ್ಲಿ ಮಂಗಳೂರು ನಗರ

ರಸ್ತೆ ಮಧ್ಯೆ ಕಾಂಗ್ರೇಸ್ ಸಮಾವೇಶ – ಟ್ರಾಫಿಕ್ ಕಿರಿಕಿರಿಯಲ್ಲಿ ಮಂಗಳೂರು ನಗರ

ಮಂಗಳೂರು ನವೆಂಬರ್ 6: ಮೈಧಾನ ಅಥವಾ ಸಭಾಂಗಣದಲ್ಲಿ ನಡೆಸಬೇಕಾದ ಸಮಾವೇಶವನ್ನು ರಸ್ತೆ ಮಧ್ಯೆ ನಡೆಸಿ ಮಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರದಾದ್ಯಂತ ಇಂದು ಟ್ರಾಫಿಕ್ ಕಿರಿಕಿರಿ . ನಗರದಲ್ಲಿ ವಾಹನ ಸವಾರರು ಹಿಡಿಶಾಪ ಹಾಕಿ ಸಾಗುತ್ತಿದ್ದ ದೃಶ್ಯ ನಗರದ ಬಹುತೇಕ ಕಡೆ ಕಂಡುಬಂತು. ಈ ಸಮಸ್ಯೆಗೆ ಕಾರಣ ಕಾಂಗ್ರೆಸ್ ಸಮಾವೇಶ.

ಮೈದಾನದಲ್ಲೂ ಸಭಾಂಗಣದಲೋ ಸಮಾವೇಶ ಆಯೋಜಿಸುವುದು ಸಾಮಾನ್ಯ .ಆದರೆ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ನಡು ರಸ್ತೆಯಲ್ಲಿಯೇ ವೇದಿಕೆ ಹಾಕಿ ಸಮಾವೇಶ ನಡೆಸುತ್ತಿದ್ದಾರೆ .ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಸಮಾವೇಶ ಏರ್ಪಡಿಸಲಾಗಿದ್ದು ಮಲ್ಲಿಕಟ್ಟೆ ಮುಖ್ಯ ರಸ್ತೆಯ ಒಂದು ಭಾಗವನ್ನೇ ಬ್ಲಾಕ್ ಮಾಡಲಾಗಿದೆ.

ಕಾಂಗ್ರೆಸ್‌ ಬೂತ್ ಮಟ್ಟದ ಪ್ರತಿನಿಧಿಗಳ ಸಮಾವೇಶ ಇದಾಗಿದೆ. ಕಾಂಗ್ರೆಸ್ ಭವನದಲ್ಲಿಯೇ ಇರುವ ಸಭಾಂಗಣದಲ್ಲಿ ಸಮಾವೇಶ ನಡೆಸದೆ ರಸ್ತೆ ಬ್ಲಾಕ್ ಮಾಡಿ ನಡು ರಸ್ತೆಯಲ್ಲಿ ಸಮಾವೇಶ ನಡೆಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಮುಂಜಾನೆ 10:30 ಕ್ಕೆ ಆರಂಭವಾಗಬೇಕಾಗಿದ್ದ ಈ ಸಮಾವೇಶ ಮಧ್ಯಾಹ್ನ ೧ ಗಂಟೆಯಾದರೂ ಕಾರ್ಯಕ್ರಮ ಆರಂಭಗೊಳ್ಳದೇ ಇರುವುದು ಕಾಂಗ್ರೆಸ್ ನ ಸಮಯ ಪಾಲನೆಯನ್ನು ಸೂಚಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

comments