LATEST NEWS
ಸಾವಲ್ಲೂ ಸೆಲ್ಫಿ,!!! ಮಿತಿ ಮೀರಿದ ಸೆಲ್ಫಿ ಹುಚ್ಚು
ಸಾವಲ್ಲೂ ಸೆಲ್ಫಿ,!!! ಮಿತಿ ಮೀರಿದ ಸೆಲ್ಫಿ ಹುಚ್ಚು
ಕಟ್ಟಡ ದುರಂತ ಸಂದರ್ಭದಲ್ಲಿ ಸತ್ತ ಹೆಣದೊಂದಿಗೆ ಯವಕನ ಸೆಲ್ಫಿ..!
ಪುತ್ತೂರು, ಎಪ್ರಿಲ್ 25 : ಪುತ್ತೂರಿನಲ್ಲಿ ನಿನ್ನೆ ನಡೆದ ಕಟ್ಟಡ ನಿರ್ಮಾಣದ ದುರಂತ ವೇಳೆ ಎಲ್ಲರೂ ರಕ್ಷಣಾ ಕಾರ್ಯಚರಣೆಯಲ್ಲಿ ನಿರತರಾಗಿದ್ದಾಗ ಕಾರ್ಯಚರಣೆಗೆ ಬಂದ ವ್ಯಕ್ತಿಯೋರ್ವ ಸತ್ತ ಹೆಣದೊಂದಿಗೆ ಸೆಲ್ಫಿ ತೆಗೆದ ಘಟನೆ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ ಕಾಮಗಾರಿ ನಡೆಸುತ್ತಿರುವ ಸಂಧರ್ಭದಲ್ಲಿ ಮಣ್ಣಿನ ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.
ಈ ವೇಳೆ ಮಣ್ಣಿನಡಿಗೆ ನಾಲ್ಕು ಮಂದಿ ಸಿಲುಕಿ ಹಾಕಿದ್ದವರ ರಕ್ಷಣೆಗೆ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಕ್ಕೆ ಇಳಿದಿದ್ದರು.
ಆ ಸಂದರ್ಭದಲ್ಲಿ ಮಣ್ಣಿನಡಿ ಹೂತುಹೋಗಿದ್ದ ಕಾರ್ಮಿಕ ನೋರ್ವನ ಹೆಣ ಕಂಡಿದೆ.
ಆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆಂದು ಬಂದ ಅಸಮಿ ಒಬ್ಬ ಬಂದ ಕಾರ್ಯ ಬಿಟ್ಟು ಸತ್ತ ಹೆಣದೊಂದಿಗೆ ಸೆಲ್ಪೀ ತೆಗೆದಿದ್ದಾನೆ.
ಇದನ್ನು ನೋಡಿದ ಯಾರೋ ಅದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆ ಯುವಕನ ನಡತೆಗೆ ಆಕ್ರೋಶ ವ್ಯಕ್ತವಾಗಿದೆ.
You must be logged in to post a comment Login