LATEST NEWS
ಬ್ಯಾಂಕ್ ಗಳಿಗೆ ವಾರದ ಕೊನೆಯಲ್ಲಿ 4 ದಿನ ಸರಣಿ ರಜೆ
ಬ್ಯಾಂಕ್ ಗಳಿಗೆ ವಾರದ ಕೊನೆಯಲ್ಲಿ 4 ದಿನ ಸರಣಿ ರಜೆ
ಮಂಗಳೂರು ಎಪ್ರಿಲ್ 25: ಈ ತಿಂಗಳ ಕೊನೆಯ ಬಾಗದಲ್ಲಿ ಮೂರು ದಿನ ಸೇರಿ ಮೇ ತಿಂಗಳ 2 ನೇ ತಾರಿಕಿನವರೆಗೆ ಬ್ಯಾಂಕ್ ಗಳಿಗೆ ರಜೆ ಇರುವ ಕಾರಣ ತಿಂಗಳ ಕೊನೆಯಲ್ಲಿ ಹಣಕಾಸು ವಹಿವಾಟು ನಡೆಸುವವರು ಈ ರಜೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
ರಜಾ ಪಟ್ಟಿ ಪ್ರಕಾರ ಎಪ್ರಿಲ್ 28 ನಾಲ್ಕನೆ ಶನಿವಾರವಾಗಿದ್ದು ಬ್ಯಾಂಕ್ ವಹಿವಾಟು ಇರುವುದಿಲ್ಲ, 29 ಭಾನುವಾರ, 30 ನೇ ತಾರಿಕು ಸೋಮವಾರ ಬುದ್ದ ಪೂರ್ಣಿಮಾ ನಿಮಿತ್ತ ಸರಕಾರಿ ರಜೆ, ಮೇ 1 ನೇ ತಾರಿಕು ಮಂಗಳವಾರ ಕಾರ್ಮಿಕ ದಿನಾಚರಣೆ ನಿಮಿತ್ತ ಬ್ಯಾಂಕ್ ಗಳಿಗೆ ರಜೆ. ಈ ಹಿನ್ನಲೆಯಲ್ಲಿ ಈ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ವಹಿವಾಟು ನಡೆಸುವುದು ಉತ್ತಮ. ಕೊನೆ ಕ್ಷಣದಲ್ಲಿ ಬ್ಯಾಂಕ್ ಗಳ ವಹಿವಾಟಿನ ಒತ್ತಡ, ಎಟಿಎಂಗಳಲ್ಲಿ ಹಣ ಇಲ್ಲದಂತಾಗುವ ಸಂದರ್ಭವೂ ಇದ್ದು ಪರದಾಟ ತಪ್ಪಿಸಲು ಈಗಲೇ ಸಮರ್ಪಕ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದ ಕೆಲವು ಕಡೆ ಈಗಾಗಲೇ ಎಟಿಎಂಗಳಲ್ಲಿ ಹಣ ಇಲ್ಲದೆ ಖಾಲಿ ಇರುವುದು ಕಂಡು ಬರುತ್ತಿದೆ. ಈ ನಡುವೆ ಸಾಲು ಸಾಲು ರಜೆಗಳು ಎಟಿಎಂಗಳಲ್ಲಿ ಎಟಿಎಂಗಳಲ್ಲಿ ಹಣ ಇಲ್ಲದಂತಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
You must be logged in to post a comment Login