Connect with us

    LATEST NEWS

    ಮಕ್ಕಳ ಮನೆಗೆ ಲೋಕಾಯುಕ್ತರ ಭೇಟಿ

    ಮಕ್ಕಳ ಮನೆಗೆ ಲೋಕಾಯುಕ್ತರ ಭೇಟಿ

    ಉಡುಪಿ, ಡಿಸೆಂಬರ್ 27: ಸಮಾಜದ ಮುಖ್ಯವಾಹಿನಿಗೆ ಕೊರಗ ಸಮುದಾಯ ಬರಬೇಕಾದರೆ ಶಿಕ್ಷಣ ಅತಿ ಮುಖ್ಯ, ಆ ಕಾರ್ಯ ಕುಂಭಾಶಿ ಮಕ್ಕಳ ಮನೆಯಲ್ಲಿ ಯಶಸ್ವಿಯಾಗಿರುವುದನ್ನು ನೋಡಿ ಲೋಕಾಯುಕ್ತ ನ್ಯಾಯಮೂರ್ತಿ ಟಿ.ವಿಶ್ವನಾಥ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು.

    ಅವರು ಇಂದು ಕುಂಭಾಶಿ ಮಕ್ಕಳ ಮನೆಯಲ್ಲಿ ಜಿಲ್ಲಾ ಆಡಳಿತ ಮತ್ತು ಕುಂದಾಪುರ ಕಾನೂನು ಸೇವಾ ಸಮಿತಿಯವರು ಜಂಟಿಯಾಗಿ ಆಯೋಜಿಸಿದ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಮಕ್ಕಳ ಮನೆಯ ಮಕ್ಕಳಿಂದ ಹಾಡು, ನೃತ್ಯ, ಡೋಲು ವಾದನ, ಬುಟ್ಟಿ ನೇಯ್ಗೆ ಮುಂತಾದ ಕರಕುಶಲಗಳನ್ನು ವೀಕ್ಷಿಸಿದರು.

    ಸಮಾಜದಲ್ಲಿ ಗಿರಿಜನರಿಗೆ ಮತ್ತು ಪರಿಶಿಷ್ಟ ಪಂಗಡದವರ ಬಗ್ಗೆ ಕಳಕಳಿ ಇರುವಂತವರು, ಗಿರಿಜನ ಸಮುದಾಯಕ್ಕೆ ಮತ್ತು ಅವರ ಮಕ್ಕಳ ಏಳಿಗೆಗೆ ಯಾವ ರೀತಿಯಲ್ಲಿ ಸಹಕಾರ ಮಾಡಬಹುದು ಎಂಬ ವಿಚಾರದಲ್ಲಿ ಹೆಚ್ಚಿನ ಫಲದಾಯಕವಾದ ಸಂವಾದ ನಡೆಯಿತು.

    ಇದು ನನಗೆ ಅತ್ಯಂತ ಸಂತೋಷ ತಂದು ಕೊಡುವ ಕಾರ್ಯಕ್ರಮ ಇನ್ನು ಮುಂದಕ್ಕೂ ಈ ಭವನದಲ್ಲಿ ಮತ್ತು ಜಿಲ್ಲೆಯ ಎಲ್ಲಾ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಕಡೆಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮ ನಡೆದು ಅವರ ಏಳಿಗೆಗೆ ಎಲ್ಲರೂ ಸಹಕರಿಸುವುದು ಅಗತ್ಯ ಎಂದು ಲೋಕಾಯುಕ್ತರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply