Connect with us

    LATEST NEWS

    ನ್ಯೂ ಇಯರ್ ಪಾರ್ಟಿಗೆ ಬಜರಂಗದಳ ವಿರೋಧ

    ನ್ಯೂ ಇಯರ್ ಪಾರ್ಟಿಗೆ ಬಜರಂಗದಳ ವಿರೋಧ

    ಮಂಗಳೂರು ಡಿಸೆಂಬರ್ 27: ಹೊಸ ವರ್ಷ ಆಚರಣೆಯ ಹೆಸರಿನಲ್ಲಿ 31 ಡಿಸೆಂಬರ್ ರಂದು ನಡೆಯುವ ಪಾರ್ಟಿಗೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.

    ಹೊಸವರ್ಷದ ಸಂದರ್ಭದಲ್ಲಿ ಡಿಸೆಂಬರ್ 31 ರ ರಾತ್ರಿ ನಗರದ ಹಲವು ಹೋಟೆಲ್ ಹಾಗೂ ಪಬ್ ಗಳಲ್ಲಿ ಪಾರ್ಟಿ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಮಂಗಳೂರಿನಲ್ಲಿ ಹಮ್ಮಿಕೊಂಡಿವೆ. ಈ ನಡುವೆ ಡಿಸೆಂಬರ್ 31 ರಂದು ನಡೆಯುವ ನ್ಯೂ ಇಯರ್ ಪಾರ್ಟಿಗೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.

    ಹೊಸವರುಷದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ. ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು ಮುಗ್ದ ಹೆಣ್ಣುಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ.

    ಈ ಹಿನ್ನಲೆಯಲ್ಲಿ ಯಾವುದೇ ಹೋಟೆಲ್, ಪಬ್ ಗಳಿಗೆ ಯಾವುದೇ ಡಿ ಜೆ ಪಾರ್ಟಿ ನಡೆಸಲು ಅನುಮತಿ ಪೊಲೀಸ್ ಇಲಾಖೆ ನೀಡಬಾರದು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ. ಎಲ್ಲಾ ಬಾರ್ ಪಬ್ ಗಳು ರಾತ್ರಿ 11:00ಗಂಟೆ ಒಳಗೆ ಮುಚ್ಚಬೇಕು ಎಂದು ಪೊಲೀಸ್ ಕಮೀಷನರಿಗೆ ಬಜರಂಗದಳ ಮನವಿ ಮಾಡಿದೆ, ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply