Connect with us

    LATEST NEWS

    ಬೇರೆಯವರ ಸಾಧನೆಗೆ ಬ್ಯಾನರ್ ಹಾಕಿ ಕ್ರೆಡಿಟ್ ಪಡೆಯುವುದು ಬಿಜೆಪಿಗರ ಚಾಳಿ : ಸಿ ಎಂ ಸಿದ್ದರಾಮಯ್ಯ

    ಬೇರೆಯವರ ಸಾಧನೆಗೆ ಬ್ಯಾನರ್ ಹಾಕಿ ಕ್ರೆಡಿಟ್ ಪಡೆಯುವುದು ಬಿಜೆಪಿಗರ ಚಾಳಿ : ಸಿ ಎಂ ಸಿದ್ದರಾಮಯ್ಯ

    ಉಡುಪಿ, ಜನವರಿ 08 : ಯಡಿಯೂರಪ್ಪಗೆ ಒಂದು ನಾಲಗೆಯಲ್ಲ, ಎರಡೆರಡು ನಾಲಗೆಯಿದೆ. ಬಿಜೆಪಿ ಅಧಿಕಾರವಿದ್ದಾಗ ಒಂದು ಮಾತಾಡ್ತಾರೆ, ಇಲ್ಲದಿದ್ದಾಗ ಇನ್ನೊಂದು ಮಾತಾಡ್ತಾರೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಗೋಡ್ಸೆ ಅನುಯಾಯಿ ಎಂದು ಬಿಎಸ್ ವೈ ಹಾಗೂ ಯೋಗಿ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದರು.

    ಯಡಿಯೂರಪ್ಪ ಹಸಿರು ಶಾಲು ಹಾಕಿ ರೈತರ ಮೇಲೆ ಗುಂಡು ಹಾರಿಸಿದರು. ಇಬ್ಬರು ರೈತರನ್ನು ಕೊಂದು ಹಾಕಿದರೆಂದ ಅವರು ಬಿಜೆಪಿ ನಾಯಕರು ಕೋಮುವಾದಿಗಳು. ಯೋಗಿ ಆದಿತ್ಯನಾಥ್ ಮಹಾನ್ ಕೋಮುವಾದಿಯಾಗಿ ನನ್ನನ್ನು ಟೀಕಿಸಿದರು. ಯೋಗಿ ರಾಜ್ಯದಲ್ಲಿ ಜಂಗಲ್ ರಾಜ್ ಆಡಳಿತವಿದೆ. ಬಿಹಾರ್ -ಯುಪಿ ಕಾನೂನು ಸುವ್ಯವಸ್ಥೆ ಇಲ್ಲದ ರಾಜ್ಯ. ನಾನು ಕರ್ನಾಟಕದ ಮಣ್ಣಿನ ಮಗ, ನನಗೆ ಬುದ್ದಿ ಹೇಳಿಕೊಡುವ ಅಗತ್ಯವಿಲ್ಲ ಯೋಗಿ ಆದಿತ್ಯನಾಥ್ ಗೆ ಇತಿಹಾಸ ಗೊತ್ತಿಲ್ಲ. ಯೋಗಿಯಿಂದ ಹಿಂದುತ್ವ ಕಲಿಯುವ ಅಗತ್ಯವಿಲ್ಲ, ಹಿಂದುತ್ವ ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ ಎಂದು ಹೇಳಿದರು.

    ಪರಿವರ್ತನೆ ಆಗಬೇಕಿರುವುದು ಜನರಲ್ಲ, ಬಿಜೆಪಿ ನಾಯಕರುಗಳು ಪರಿವರ್ತನೆಯಾಗಬೇಕಿದೆ ಎಂದರು. ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲ ,ನಮ್ಮದು ಮನುಷ್ಯತ್ವ ಇರುವ ಹಿಂದುತ್ವ, ಬದಲಾಗಿ ರಾಕ್ಷಸೀ ಪ್ರವೃತ್ತಿ ಇರುವ ಹಿಂದುತ್ವವಲ್ಲ ಎಂದ ಸಿ ಎಂ ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.

    ನಾರಾಯಣ ಗುರು, ಕೆಂಪೇಗೌಡ, ಮಹಾವೀರ, ಅಕ್ಕಮಹಾದೇವಿ ಹಾಗೂ ಇನ್ನಿತರರ ಜಯಂತಿ ಆರಂಭಿಸಿದ್ದು ನಾವೇ. ನೀವು ಟಿಪ್ಪು ಜಯಂತಿ ಮಾಡಲ್ಲ ಬಿಡಲ್ಲ ಎಂದಿರಿ. ಆದ್ರೆ ನಾನು ಆ ಗೊಡ್ಡು ಬೆದರಿಕೆಗೆ ಹೆದರದೇ ಜಯಂತಿ ಆಚರಿಸಿ ತೋರಿಸಿದ್ದೇನೆ. ಟಿಪ್ಪು ಜೊತೆ ಹಲವಾರು ಜಯಂತಿಗಳನ್ನೂ ನಾವು ಆಚರಿಸ್ತೀವಿ ರಾಷ್ಟ್ರಪತಿಯವರೇ ಟಿಪ್ಪು ಪರ ಮಾತಾಡಿದ್ದರು.

    ರಾಜ್ಯದ ಬಗ್ಗೆ ತಿಳಿಯಲು ನಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿದುಕೊಳ್ಳಿ ಮೋದಿ ಮುಂದೆ ಮಾತಾಡೋ ಧಂ ರಾಜ್ಯದ ಬಿಜೆಪಿಗರಿಗಿಲ್ಲ. ಪ್ರಧಾನಿ ಮುಂದೆ ಬಿಎಸ್ ವೈ, ಶೆಟ್ಟರ್, ಡಿವಿಎಸ್ ತುಟಿಪಿಟಿಕ್ ಹೇಳಲ್ಲ ಜೆಡಿಎಸ್ ನಾಯಕ ರೇವಣ್ಣ ಮಾತೇ ಎತ್ತಿಲ್ಲ ಸರ್ವಪಕ್ಷ ಸಭೆಯಲ್ಲಿ ಶೆಟ್ಟರ್, ಈಶ್ವರಪ್ಪ ಉಸಿರೆತ್ತಿಲ್ಲ ರೈತರ ಬಗ್ಗೆ ಬಿಜೆಪಿ- ಜೆಡಿಎಸ್ ಗೆ ಕಾಳಜಿಯಿಲ್ಲ ಎಂದು ಜೆಡಿಎಸ್ ಮೇಲೂ ಹರಿಹಾಯ್ದರು.

    ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ವಿರುದ್ಧವೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬೇರೆಯವರ ಸಾಧನೆಗೆ ಬ್ಯಾನರ್ ಹಾಕಿ ಕ್ರೆಡಿಟ್ ಪಡೆಯುವುದು ಬಿಜೆಪಿಗರ ಚಾಳಿ. ಬಿಜೆಪಿಗರು ಕೆಲಸ ಮಾಡುವುದು ಕಮ್ಮಿ, ಪ್ರಚಾರ ವಿಪರೀತ.

    ನರೇಂದ್ರ ಮೋದಿಯವರು ನೀಡಿದ ಭರವಸೆಗಳನ್ನು ಈಡೇರಿಸಲೇ ಇಲ್ಲ. ಮೋದಿಯ ‘ಅಚ್ಚೇ ದಿನ್ ಬಂತಾ’? ಅಚ್ಚೇದಿನ್ ಬಂದಿದ್ದು ಬಂಡವಾಳ ಶಾಹಿಗಳಿಗೆ ಮಾತ್ರ. ಮೋದಿ ವಿಪರೀತ ಪ್ರಚಾರ ಪ್ರೀಯ ಎಂದ ಸಿ ಎಂ ಅಚ್ಚೇದಿನ್ ಅಂಬಾನಿ , ಅದಾನಿಗೆ, ರಾಮ್ ದೇವ್ ಗೆ ಮಾತ್ರ ಅಚ್ಚೇದಿನ್ ಬಂದಿದೆ.

    15 ಲಕ್ಷ ಬಿಡಿ, 15 ಪೈಸೆಯಾದ್ರೂ ನಿಮ್ ಖಾತೆಗೆ ಬಂತಾ..?೨ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು, ಆದ್ರೆ ಸಾಧ್ಯವಾಗಿಲ್ಲ. ರೈತರ ಸಾಲಮನ್ನಾ ಮಾಡಲೂ ಕೇಂದ್ರಕ್ಕೆ ಸಾಧ್ಯವಾಗಿಲ್ಲ. ಪ್ರಧಾನಿಮುಂದೆ ರಾಜ್ಯ ನಾಯಕರು ತುಟಿಪಿಟಿಕ್ ಎನ್ನಲಿಲ್ಲ. ಇದನ್ನು ನಿಯೋಗ ಕರೆದೊಯ್ದಾಗ ನಾನು ಕಂಡಿದ್ದೀನಿ.ನಾವು ಯಾವತ್ತಿದ್ದರೂ ತೆರೆದ ಮನಸ್ಸಿನಲ್ಲಿರುತ್ತೇವೆ ಮತ್ತು ರೈತರ ಸಮಸ್ಯೆ ಬಗ್ಗೆ ಪರಿಹರಿಸುತ್ತೇವೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply