Connect with us

LATEST NEWS

ಬೆಂಕಿ ಅನಾಹುತ; ಹತ್ತಿ ಲಾರಿ ಭಸ್ಮ

ಉಡುಪಿ, ಆಗಸ್ಟ್ 30: ಹತ್ತಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ದುರ್ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಸಾಲ್ಮರ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಬ್ರಹ್ಮಾವರಕ್ಕೆ ಈಚರ್ ಮಿನಿಲಾರಿಯಲ್ಲಿ ಹತ್ತಿ ಸಾಗಾಟ ಮಾಡಲಾಗುತ್ತಿತ್ತು. ಹತ್ತಿ ಸಾಗಾಟ ಲಾರಿಗೆ ಬೆಂಕಿ ಹತ್ತಿದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆಯ ಸಂದರ್ಭದಲ್ಲಿ ಲಾರಿಯಲ್ಲಿದ್ದ ಚಾಲಕ ಅದೃಷ್ಟವಶತ್ ಬಚಾವ್ ಆಗಿದ್ದಾನೆ. ಘಟನೆಯಲ್ಲಿ ಸುಮಾರು 60 ಸಾವಿರ ಮೌಲ್ಯದ ಹತ್ತಿ ಬೆಂಕಿಯಿಂದ ನಾಶವಾಗಿದೆ.

Facebook Comments

comments