KARNATAKA
ಪ್ರಮೋದ್ ಮಧ್ವರಾಜ್ ಕೂಡಲೇ ನನ್ನ ಮೇಲೆ ಕೇಸು ದಾಖಲಿಸಿ-ಆರ್.ಟಿ.ಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ
ಪ್ರಮೋದ್ ಮಧ್ವರಾಜ್ ಕೂಡಲೇ ನನ್ನ ಮೇಲೆ ಕೇಸು ದಾಖಲಿಸಿ-ಆರ್.ಟಿ.ಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ
ಮಂಗಳೂರು, ಮಾರ್ಚ್ 24: ಪ್ರಮೋದ್ ಮಧ್ವರಾಜ್ ಆದಷ್ಟು ಬೇಗ ತನ್ನ ಮೇಲೆ ಕೇಸು ದಾಖಲಿಸಿಕೊಳ್ಳಲಿ, ಇಲ್ಲದೇ ಹೋದಲ್ಲಿ ತಾನೇ ಅವರ ಮೇಲೆ ಕೇಸು ದಾಖಲಿಸುವುದಾಗಿ ಆರ್.ಟಿ.ಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು 1.10 ಕೋಟಿ ರೂಪಾಯಿ ಆಸ್ತಿ ಅಡವಿಟ್ಟು 193 ಕೋಟಿ ರೂಪಾಯಿ ಸಾಲ ಪಡೆದಿರುವ ಪ್ರಮೋದ್ ಮಧ್ವರಾಜ್ ಮಾಡಿರುವುದು ದೊಡ್ಡ ಫ್ರಾಡ್ ಆಗಿದ್ದು, ಈ ಫ್ರಾಡ್ ನಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದೂ ಬಹಿರಂಗವಾಗಬೇಕಿದೆ ಎಂದರು.
ಮಧ್ವರಾಜ್ ತನಗೆ ಲೀಗಲ್ ನೋಟೀಸ್ ಜಾರಿ ಮಾಡಿದರೆ ನಾನು ಸ್ವಾಗತಿಸುತ್ತೇನೆ.
ಮಧ್ವರಾಜ್ ತನಗೆ ಈ ವಿಚಾರದಲ್ಲಿ ಕ್ಷಮೆ ಕೇಳಲು ಮೂರು ದಿನಗಳ ಗಡುವು ನೀಡಿದ್ದಾರೆ.
ಆದರೆ ತಾನು ಮೂವತ್ತು ದಿನಗಳ ಗಡುವು ನೀಡುತ್ತೇನೆ.
ಅವರು ನನ್ನ ಮೇಲೆ ಕೇಸು ದಾಖಲಿಸಲಿ. ಇಲ್ಲದೇ ಹೋದಲ್ಲಿ ನಾನು ಮಧ್ವರಾಜ್ ಮೇಲೆ ಕೇಸು ದಾಖಲಿಸಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಮೋದ್ ಮಧ್ವರಾಜ್ ಮಾಡಿದ ಫ್ರಾಡ್ ಕುರಿತ ಎಲ್ಲಾ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
You must be logged in to post a comment Login