Connect with us

LATEST NEWS

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆಸ್ಫೋಟಕ ತಿರುವು ;ಪ್ರಮುಖ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ FSL ವರದಿಯಲ್ಲಿ ಉಲ್ಲೇಖ

Share Information

ಬೆಂಗಳೂರು, ಆಗಸ್ಟ್ 24 : ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿ ಕೊನೆಗೆ ತಣ್ಣಗಾಗಿದ್ದ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಈಗ ಮತ್ತೆ ಸ್ಫೋಟಕ ತಿರುವು ಪಡೆದಿದೆ.ಸಿಐಡಿ ಬಿ ರಿಪೋರ್ಟ್ ಸಲ್ಲಿಕೆ ಯೊಂದಿಗೆ ಹಳ್ಳ ಹಿಡಿದಿದ್ದ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ಇದೀಗ ಮತ್ತೆ ಬಿಚ್ಚಿಕೊಂಡಿದೆ. ಗಣಪತಿಯವರ ಮೊಬೈಲ್ ಹಾಗೂ ಕಂಪ್ಯೂಟರ್ ಗಳಲ್ಲಿ ಸಾಕ್ಷ್ಯಾಧಾರಗಳ ನಾಶ ಬಗ್ಗೆ ಎಫ್ಎಸ್ಎಲ್ ವರದಿಯಲ್ಲಿ ಉಲ್ಲೇಖಿಸಿದ್ದು ದಾಖಲೆ ಸಮೇತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಯಲಾಗಿದೆ. 2016 ಜೂನ್ 7 ರಂದು ಮಡಿಕೇರಿಯ ಲಾಡ್ಜ್ ನಲ್ಲಿ ಗಣಪತಿಯವರು ನೇಣು ಹಾಕಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಗಣಪತಿ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ಕೊಟ್ಟಿದ್ದರು. ಸಚಿವ ಕೆ ಜೆ ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎಎಂ ಪ್ರಸಾದ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ರಾಜ್ಯಮತ್ತು ಪೊಲೀಸ್ ಇಲಾಖೆಯಲ್ಲಿ ಈ ವಿಚಾರ ಕೋಲಾಹಲ ಸೃಷ್ಟಿಸಿದ್ದು ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿ ಕೈ ತೊಳೆದುಕೊಂಡಿತು. ಗಣಪತಿ ಆತ್ಮಹತ್ಯೆ ಸಂಬಂಧ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಿದ್ದ ಎಫ್ಐಆರ್ ದಾಖಲಿಸುವಂತೆ ಗಣಪತಿ ಪುತ್ರ ನೇಹಾಲ್ ಕೋರ್ಟ್ ಮೆಟ್ಟಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಜೆಎಂಎಫ್ ಸಿ ಕೋರ್ಟ್ ಎಫ್ ಐ ಆರ್ ದಾಖಲಿಸಿ ತನಿಖೆಗೆ ಸೂಚಿಸಿತ್ತು. ಹೆಚ್ಚಿನ ವಿಚಾರಣೆಗೆ ರಾಜ್ಯ ಸರ್ಕಾರ ಸಿಐಡಿಗೆ ಪ್ರಕರಣ ವಹಿಸಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯ ಇಲ್ಲವೆಂದು ಕೋರ್ಟಿಗೆ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು. ಶಿಕ್ಷಣಕ್ಕೆ ತೊಂದರೆ ಆಗ್ತದೆ ಎಂಬ ಕಾರಣಕ್ಕೆ ಗಣಪತಿ ಪುತ್ರ ಬಿ ರಿಪೋರ್ಟ್ ಪ್ರಶ್ನಿಸಿ ಮೇಲ್ಮನೆ ಸಲ್ಲಿಸುವುದಿಲ್ಲ ಎಂದು ಕೋರ್ಟಿಗೆ ಲಿಖಿತ ಹೇಳಿಕೆ ನೀಡಿದ್ದರು. ಆದರೆ ಗಣಪತಿ ತಂದೆ ಕಶಲಪ್ಪ ಬಿ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನೇ ಏಕ ಸದಸ್ಯಪೀಠ ವಜಾಗೊಳಿಸಿತ್ತು .ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಈ ಆದೇಶ ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಯುತ್ತಿದೆ. ಗಣಪತಿ ಸಾವಿಗೂ ಮುನ್ನ ಡಿವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್, ಡಿಜಿಪಿ ಆರ್ ಕೆ ದತ್ತ ಪುತ್ರ ಅಭಿಜಯ್, ಶಾಸಕ ಮುನಿರತ್ನ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಗೆ ಕರೆ ಮಾಡಿದ್ದರು. ಎಸಿಪಿ ಜಯರಾಮ್, ಸಹೋದರ ರಾಮನಗರ ಡಿವೈಎಸ್ಪಿ ಎಂ.ಕೆ. ತಮ್ಮಯ್ಯ, ಎಸಿಪಿ ರಂಗಸ್ವಾಮಿ, ಹಿರಿಯ ಪೊಲೀಸ್ ಅಧಿಕಾರಿ ಟಿ ರಘು ಹಾಗೂ ರಾಜಸ್ತಾನದ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದ್ದಾರೆ. ಈ ಎಲ್ಲಾ ಕರೆಗಳ ಮಾಹಿತಿಗಳನ್ನು ನಾಶ ಮಾಡಲಾಗಿದೆ ಎಂದು ಎಫ್ ಎಸ್ಎಲ್ ತನ್ನ ಸುದೀರ್ಘ ವರದಿಯಲ್ಲಿ ಉಲ್ಲೇಖಿಸಿದೆ .ಅದೂ ಅಲ್ಲದೆ ಗಣಪತಿಯಿಂದ ವಶಕ್ಕೆ ಪಡೆದಿದ್ದ ಸರ್ವಿಸ್ ಸರ್ವಿಸ್ ರಿವಾಲ್ವರ್, ಕಾರ್ಟೇಜ್ ಗಳು, ಪೆನ್ ಡ್ರೈವ್, ಕಂಪ್ಯೂಟರ್ ಹಾಗೂ ಮೊಬೈಲ್ ಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ತಂಡ ಕಳಿಸಿತ್ತು. ಗಣಪತಿ ಬಳಸಿದ ಬೆಲ್ಟ್ ಪೊಲೀಸರು ಬಳಸುವ ಪೊಲೀಸ್ ಬೆಲ್ಟ್ ಅಲ್ಲ, ಪೊಲೀಸರು ಕ್ಯಾನ್ವಾಸ್ ಬೆಲ್ಟ್ ಬಳಸುತ್ತಿದ್ದರು. ಆದರೆ ಗಣಪತಿ ಧರಿಸಿದ್ದು ಲೆದರ್ ಬೆಳ್ಟಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡು ಕೊಠಡಿಗೆ ಚಿಲಕ ಹಾಕಲಾಗಿತ್ತು. ಬಳಿಕ ಚಿಲಕ ತೆಗೆದಿದ್ದು ಅದರ ಬಗ್ಗೆ ವಿಡಿಯೋ ಕೂಡ ಮಾಡಿಲ್ಲ ಎಂದು ಆರೋಪಿಸಲಾಗಿದೆ .ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣಪತಿ ಸಹೋದರ ಮಾಚಯ್ಯ ಅವರು ರಾಜಕೀಯ ಸೇವಕರಾಗಿ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ, ಉನ್ನತ ಮಟ್ಟದ ತನಿಖೆಗೆ ಸುಪ್ರೀಂ ಕೋರ್ಟ್ ನಲ್ಲಿ ಅನುಮತಿ ಸಿಗುವ ನಂಬಿಕೆ ಇದೆ, ಸತ್ಯ ಎಲ್ಲವೂ ಹೊರಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply