LATEST NEWS
ಜೀವ ಬೆದರಿಕೆ ಹೇಳಿಕೆ ನೀಡಿ ನಗೆಪಾಟಲಿಗೀಡಾದ ನಟ ಪ್ರಕಾಶ್ ರೈ
ಜೀವ ಬೆದರಿಕೆ ಹೇಳಿಕೆ ನೀಡಿ ನಗೆಪಾಟಲಿಗೀಡಾದ ನಟ ಪ್ರಕಾಶ್ ರೈ
ಮಂಗಳೂರು, ಮಾರ್ಚ್ 14 : ಜೀವ ಬೆದರಿಕೆಯ ಹೇಳಿಕೆ ನೀಡಿ ಮಂಗಳೂರಿನಲ್ಲಿ ನಟ ಪ್ರಕಾಶ್ ರೈ ಅವರು ನಗೆಪಾಟಲಿಗೀಡಾಗಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ್ದ ಅವರಿಗೆ ನಗರದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು,
ಕಾರ್ ನ ಡ್ರೈವರ್ ನ್ನು ನಾಲ್ಕು ಮಂದಿ ಪ್ರಶ್ನೆ ಮಾಡಿದ್ದಾರೆ.ನನ್ನ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಕರಾವಳಿಯಲ್ಲಿ ಭಯದ ವಾತಾವರಣ ಇದೆ ಎಂದಿದ್ದರು.
ಆದರೆ ಇದೀಗ ಈ ಸುದ್ದಿ ಉಲ್ಟಾ ಹೊಡೆದಿದ್ದು, ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಬಜ್ಪೆ ಪೋಲಿಸರು ಎಂದು ಸ್ಥಳೀಯ ಪೋಲಿಸರು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಮಫ್ತಿಯಲ್ಲಿ ಕೆಲಸ ಮಾಡಿದ್ದರು.
ಪ್ರಕಾಶ್ ರೈ ಗೊಂದಲಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾರೆ.
ಪೊಲೀಸರನ್ನು ಅಗುಂತಕರು ಎಂದು ಪ್ರಕಾಶ್ ರೈ ಅವರು ಭಾವಿಸಿ ಮಾದ್ಯಮಗಳಿಗೆ ತರಾತುರಿಯಲ್ಲಿ ಹೇಳಿಕೆ ನೀಡಿದ್ದರು.
ಇದೀಗ ಈ ಹೇಳಿಕೆಯಿಂದ ಪ್ರಕಾಶ್ ರೈ ನಗೆಪಾಟಲಿಗೀಡಾಗಿದ್ದಾರೆ.
You must be logged in to post a comment Login